Saturday, August 15, 2026

BDA Apartments

Home Front Page ಅನರ್ಹತೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ: ಎಚ್.ವಿಶ್ವನಾಥ್

ಅನರ್ಹತೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ: ಎಚ್.ವಿಶ್ವನಾಥ್

ಮುಂಬೈ, ಜುಲೈ 28,2019(www.justkannada.in):14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಜೆಡಿಎಸ್ ಅತೃಪ್ತ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.

ಅನರ್ಹತೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸ್ಪೀಕರ್ ರಮೇಶ್‌ ಕುಮಾರ್ ಅವರ ತೀರ್ಪನ್ನು ಮಾಧ್ಯಮಗಳ ಮೂಲಕ ಕೇಳಿದ್ದೇನೆ. ಅವರ ತೀರ್ಪು ಆತುರದ ನಿರ್ಧಾರವಾಗಿದೆ. ಯಾವ್ಯಾವ ಸನ್ನಿವೇಶದಲ್ಲಿ ಏನೇನು ಆಯ್ತು, ಸರ್ಕಾರ ಯಾರ ಪರವಾಗಿತ್ತು. ಇವೆಲ್ಲವನ್ನು ಸುದೀರ್ಘವಾಗಿ ಅವರು ಯೋಚಿಸಬೇಕಿತ್ತು ಎಂದು ಹೇಳಿದ್ದಾರೆ.

ಇದು ರಾಜಕಾರಣ. ಯಾವುದೋ ಶಿಕ್ಷೆ ಕೊಡುವ ಕೋರ್ಟ್‌ ಅಲ್ಲ. ಅಲ್ಲಿ ನಮ್ಮ ರಾಜೀನಾಮೆ ವಿಚಾರ ಹೆಚ್ಚು ಪ್ರಸ್ತಾಪ ಆಗಿಲ್ಲ. ಇದು ಬಹಳ ಅವಸರದಲ್ಲಿ, ಅನರ್ಹತೆಯ ಆಧಾರದ ಮೇಲೆ ತೀರ್ಪು ನೀಡಿದ್ದಾರೆ. ಸ್ಪೀಕರ್‌ ರಮೇಶ್‌ ಕುಮಾರ್‌ ಅವರದ್ದು ಅವಸರದ ತೀರ್ಪು ಎಂದು ನನಗೆ ಅನ್ನಿಸುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ನಮ್ಮ ವಾದವನ್ನು ನಾವು ಮಂಡಿಸುತ್ತೇವೆ ಎಂದು ಎಚ್‌.ವಿಶ್ವನಾಥ್‌ ತಿಳಿಸಿದರು.