Wednesday, September 30, 2026

BDA Apartments

ಮೂವರು ಬೇಟೆಗಾರರು ಬಲಿ: ಕುಟುಂಬಸ್ಥರ ಆಕ್ರೋಶ: ಅರಣ್ಯ ಸಿಬ್ಬಂದಿಯಿಂದ ತಪ್ಪಾಗ...
Home Crime ಮೂವರು ಬೇಟೆಗಾರರು ಬಲಿ: ಕುಟುಂಬಸ್ಥರ ಆಕ್ರೋಶ: ಅರಣ್ಯ ಸಿಬ್ಬಂದಿಯಿಂದ ತಪ್ಪಾಗಿದೆ ಎಂದ ಸಚಿವ ಪುಟ್ಟರಂಗಶೆಟ್ಟಿ

ಮೂವರು ಬೇಟೆಗಾರರು ಬಲಿ: ಕುಟುಂಬಸ್ಥರ ಆಕ್ರೋಶ: ಅರಣ್ಯ ಸಿಬ್ಬಂದಿಯಿಂದ ತಪ್ಪಾಗಿದೆ ಎಂದ ಸಚಿವ ಪುಟ್ಟರಂಗಶೆಟ್ಟಿ

ಮೈಸೂರು,ಆಗಸ್ಟ್,15,2026 (www.justkannada.in): ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಶಾಗ್ಯ ಗ್ರಾಮದ ಅರಣ್ಯ ಪ್ರದೇಶದ ಬಳಿ  ಪ್ರಾಣಿಗಳ ಬೇಟೆಗೆ ತೆರಳಿದ್ದ ಮೂವರ ಬೇಟೆಗಾರರು ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟಿಗೆ ಬಲಿಯಾಗಿದ್ದು ಮೂವರು ಶವಗಳನ್ನ ಮೈಸೂರಿನ ಕೆಆರ್ ಆಸ್ಪತ್ರೆಗೆ ತರಲಾಗಿದೆ.

ಶವಾಗಾರಕ್ಕೆ ಭೇಟಿ ನೀಡಿದ ಚಾಮರಾಜನಗರ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರು ಅಧಿಕಾರಿಗಳಿಂದ, ಸಂಬಂಧಿಕರಿಂದ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಮೂವರು ಮೃತದೇಹಗಳನ್ನ ಅರಣ್ಯ ಇಲಾಖೆ ಸಿಬ್ಬಂದಿ ತಂದಿದ್ದಾರೆ.  ಆದರೆ ಮೃತದೇಹಗಳನ್ನ ಎತ್ತಿಕೊಂಡು ಬರಬಾರದು.  ಬೇಟೆಗಾರರು ನಮ್ಮ ಮೇಲೆ ಪೈರಿಂಗ್ ಮಾಡಿದ್ರು ಅಂತಿದ್ದಾರೆ.  ಪ್ರತಿಯಾಗಿ ಕೌಂಟರ್ ಅಟ್ಯಾಕ್ ಮಾಡಿದ್ದೇವೆ ಎಂದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯಿಂದ ತಪ್ಪಾಗಿದೆ.   ಘಟನೆ ಬಗ್ಗೆ ಇನ್ನೂ ಯಾರೂ ಸಹ ದೂರು ಕೊಟ್ಟಿಲ್ಲ ಎಂದಿದ್ದಾರೆ. ಮೂವರು ಬೇಟೆಗಾರರು ಬಲಿ forest.jpg1 forest 1.jpg1 1

ಕುಟುಂಬಸ್ಥರ ಪ್ರತಿಭಟನೆ, ಆಕ್ರೋಶ

ಇನ್ನು ಮೂವರು ಬೇಟೆಗಾರರು ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನ ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಹಾಗೆಯೇ ಗ್ರಾಮಸ್ಥರು ಕುಟುಂಬದವರು ಹನೂರು ಪೊಲೀಸ್ ಠಾಣೆ ಮುಂದೆ ನ  ಮಲೇ ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆ ತಡೆದು ಧರಣಿ ನಡೆಸಿದ್ದಾರೆ.  ಸ್ಥಳಕ್ಕೆ ಹನೂರು ಕ್ಷೇತ್ರದ ಶಾಸಕ ಮಂಜುನಾಥ್ ಭೇಟಿ ನೀಡಿದ್ದು ಶಾಸಕರ ಮುಂದೆ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕುಟುಂಬಸ್ಥರ ಆಕ್ರೋಶ encounter

Key words: Three hunters, killed, Family,outraged, Forest staff, Minister, Puttarangashetty