ಮಂಗಳೂರು,ಆಗಸ್ಟ್,15,2026 (www.justkannada.in): ಗುಟ್ಕಾ ಪಾನ್ ಮಸಾಲ ನಿಷೇಧದಿಂದ ಅಡಿಕೆ ಬೆಳೆಗಾರರು ವ್ಯಾಪಾರಿಗಳಿಗೆ ತೊಂದರೆ ಆಗಲ್ಲ ಎಂದು ಆಹಾರ ಸಚಿವ ಯು.ಟಿ ಖಾದರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯುಟಿ ಖಾದರ್, ಪ್ರತ್ಯೇಕವಾಗಿ ಪಾನ್ ಮಸಾಲ ಬರೋದಾದರೆ ನಮ್ಮ ನಿರ್ಬಂಧವಿಲ್ಲ. ಅಡಕೆ ಬೆಳಗಾರರು ವ್ಯಾಪಾರಿಗಳಿಗೆ ಇದರಿಂದ ತೊಂದರೆ ಆಗಲ್ಲ ಎಂದರು.
2014ರಲ್ಲೂ ಗುಟ್ಕಾ ನಿಷೇಧ ಮಾಡಿದಾಗಲೂ ಇದೇ ರೀತಿ ಆಗಿತ್ತು. ಆಗಲೂ ಅಡಿಕೆ ಬೆಲೆ ಕಡಿಮೆ ಆಗಿಲ್ಲ ಜಾಸ್ತಿ ಇತ್ತು. ನಾನು ರಾಜಕೀಯ ಮಾಡಲ್ಲ. ನಮ್ಮದು ಅರೋಗ್ಯಕ್ಕೆ ಪೂರಕ ಉದ್ದೇಶ ಎಂದು ಸಚಿವ ಯು.ಟಿ ಖಾದರ್ ತಿಳಿಸಿದರು.
Key words: Gutka, pan masala, ban, Minister, UT Khader






