Sunday, October 25, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Front Page ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜುಲೈ 28,2019(www.justkannada.in): ಇಂದು ಸಂಜೆ 3 ಗಂಟೆಗೆ ಖಾಸಗಿ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಎಲ್ಲಾ 105 ಶಾಸಕರೂ ಭಾಗಿಯಾಗುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಸೋಮವಾರ 100ಕ್ಕೆ ನೂರು ಫೈನಾನ್ಸ್ ಬಿಲ್ ಪಾಸ್ ಆಗುತ್ತದೆ. ಬಿಲ್ ಪಾಸ್ ಆಗದೆ ಹೋದಲ್ಲಿ ಸಂಬಳ, ಸಾರಿಗೆ ಹಣ ಪಡೆಯೋಕೆ ಆಗುವುದಿಲ್ಲ. ಹೀಗಾಗಿ ಫೈನಾನ್ಸ್ ಬಿಲ್ ಪಾಸ್ ಆಗಲೇಬೇಕು. ಈ ಬಗ್ಗೆ ಈಗಾಗಲೇ ಸ್ಪೀಕರ್ ಹಾಗೂ ಸಭಾಪತಿ ಬಳಿ ಮನವಿ ಮಾಡಿದ್ದೇನೆ ಮತ್ತು ಅವರೂ ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ವಿಧಾನ ಸಭೆಯಲ್ಲಿ ಬೆಳಗ್ಗೆ ಬಿಲ್ ಮಂಡನೆಯಾಗುತ್ತೆ, ಮಧ್ಯಾನ ಪರಿಷತ್ ಗೆ ಹೋಗಿ ವಾಪಸ್ ಬರುವಂತೆ ಮಾಡಲಿದ್ದೇನೆ. ಈ ಫೈನಾನ್ಸ್ ಬಿಲ್ ನಲ್ಲಿ ಯಾವುದನ್ನೂ ಬದಲಿಸಿಲ್ಲ. ಮೈತ್ರಿ ಸರ್ಕಾರದ ಅವಧಿಯ ಬಿಲ್ ಮಂಡನೆ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾದ್ಯಮಗಳಿಗೆ ಹೇಳಿಕೆ ನೀಡಿದರು.