Sunday, September 20, 2026

BDA Apartments

ಲಕ್ಷ ಆಪಾದನೆಗಳು ಬಂದ್ರೂ ಮೆಟ್ಟಿ ನಿಲ್ತೇನೆ- ಸದನದಲ್ಲಿ ಸ್ಪೀಕರ್ ರಮೇಶ್ ಕುಮ...
Home Front Page  ಲಕ್ಷ ಆಪಾದನೆಗಳು ಬಂದ್ರೂ ಮೆಟ್ಟಿ ನಿಲ್ತೇನೆ- ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ..

 ಲಕ್ಷ ಆಪಾದನೆಗಳು ಬಂದ್ರೂ ಮೆಟ್ಟಿ ನಿಲ್ತೇನೆ- ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ..

ಬೆಂಗಳೂರು,ಜು,19,2019(www.justkannada.in): ನಾನು ಪಕ್ಷಪಾತ ಮಾಡಲ್ಲ. ಲಕ್ಷ ಲಕ್ಷ ಆಪಾದನೆಗಳು ಬಂದರೂ ಅದನ್ನ ನಾನು ಮೆಟ್ಟಿ ನಿಲ್ಲುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ವಿಪ್ ಬಗ್ಗೆ ಅಡ್ವಕೇಟ್ ಜನರಲ್ ಜತೆ ಸಂಪೂರ್ಣವಾಗಿ ಚರ್ಚಿಸಿದ್ದೇನೆ. ಅಡ್ವಕೇಟ್ ಜನರಲ್ ಲಿಖಿತ  ಅಭಿಪ್ರಾಯ ನೀಡಿದ್ದಾರೆ. ಸದನ ಇರುವುದರಿಂದ ಅದನ್ನ ಅದನ್ನ ಪೂರ್ಣ ಪ್ರಮಾಣದಲ್ಲಿ ಓದಲು ಆಗಲಿಲ್ಲ. ಕ್ರಿಯಾಲೋಪದ ಮೇಲೆ ರೂಲಿಂಗ್ ಕಾಯ್ದಿರಿಸಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ನಾಯಕರ ಆರೋಪ ಕುರಿತು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಹಾಗೆಯೇ ನಾನು  ಪಕ್ಷಪಾತ ಮಾಡಲ್ಲ..  ಲಕ್ಷ ಆಪಾದನೆಗಳು ಬಂದರೂ ನಾನು ಮೆಟ್ಟಿ ನಿಲ್ಲುತ್ತೇನೆ. ಅಂತಹ ಶಕ್ತಿ ನನ್ನ ತಂದೆತಾಯಿ ನೀಡಿದ್ದಾರೆ.  ನನ್ನ ಬಗ್ಗೆ ಆರೋಪಿಸುವವರು ತಮ್ಮ ಬಗ್ಗೆ ನೋಡಿಕೊಳ್ಳಲಿ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.

Key words: assembly—Speaker- Ramesh Kumar-speach