Monday, October 26, 2026

Dasara Wishes

ಇಂದು ದೆಹಲಿಗೆ ಸಿಎಂ ಸಿದ್ದರಾಮಯ್ಯ DasraWishes_JK DasraWishes JK
Happy Dasara
Home Front Page ಲಾಡ್ಸ್’ನಲ್ಲಿ ಗೆಲುವಿಗಾಗಿ ಇಂಗ್ಲೆಂಡ್ ಆಟಗಾರರಿಂದ ಬಾಲ್ ಟ್ಯಾಂಪರಿಂಗ್?!

ಲಾಡ್ಸ್’ನಲ್ಲಿ ಗೆಲುವಿಗಾಗಿ ಇಂಗ್ಲೆಂಡ್ ಆಟಗಾರರಿಂದ ಬಾಲ್ ಟ್ಯಾಂಪರಿಂಗ್?!

ಬೆಂಗಳೂರು, ಆಗಸ್ಟ್ 16, 2021 (www.justkannada.in): 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರ ವಿರುದ್ಧ ಚೆಂಡು ವಿರೂಪ ಆರೋಪ ಕೇಳಿಬಂದಿದೆ.

ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ಗೆಲುವು ಸಾಧಿಸಲು ಇಂಗ್ಲೆಂಡ್ ಆಟಗಾರರು ಬಾಲ್ ಟ್ಯಾಂಪರಿಂಗ್ ಮಾಡಿರುವ ದೂರು ಕೇಳಿ ಬಂದಿದೆ.

2ನೇ ಟೆಸ್ಟ್ ನ 4ನೇ ದಿನದ ಊಟದ ನಂತರದ ಅವಧಿಯಲ್ಲಿ ಇಂಗ್ಲೆಂಡ್‌ ತಂಡದ ಆಟಗಾರರಿಬ್ಬರು ಚೆಂಡನನ್ನು ವಿರೂಪಗೊಳಿಸಲು ತಮ್ಮ ಶೂನಲ್ಲಿರುವ ಮೊಳೆಗಳ ಬಳಕೆ ಮಾಡಿರುವುದು ಕಂಡುಬಂದಿದೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಬಳಿಕ ಸಖತ್ ವೈರಲ್ ಆಗುತ್ತಿದೆ.