ಭಾರತ-ಇಂಗ್ಲೆಂಡ್ ಟೆಸ್ಟ್: ಲಾರ್ಡ್ಸ್’ನಲ್ಲಿ ಯಾರಿಗೆ ಗೆಲುವಿನ ಖುಷಿ?

ಬೆಂಗಳೂರು, ಆಗಸ್ಟ್ 16, 2021 (www.justkannada.in): 2ನೇ ಟೆಸ್ಟ್​ನಲ್ಲಿ ಭಾರತಕ್ಕೆ ಗೆಲುವು ಕಠಿಣವಾಗಿದ್ದು, 200 ರನ್​ಗಳ ಒಳಗೆ ಟಾರ್ಗೆಟ್ ನೀಡಿದರೆ ಇಂಗ್ಲೆಂಡ್ ಸುಲಭ ಜಯ ಸಾಧಿಸಬಹುದು ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

ಅಂತಿಮ ದಿನದ ಹವಾಮಾನ ನೋಡುವುದಾದರೆ, 4ನೇ ದಿನಕ್ಕಿಂತ ಕೊಂಚ ಗಾಳಿ ಅಧಿಕವಾಗಿರಲಿದೆ. ತೇವಾಂಶವು ಸುಮಾರು ಶೇ.50-60 ನಷ್ಟು ಇರುತ್ತದೆ. ಹೀಗಾಗಿ ವರುಣನ ಕಾಟ ಅನುಮಾನ ಎಂದು ಹೇಳಲಾಗಿದೆ.

ಫಲಿತಾಂಶವಿಲ್ಲದೆ ಅಂತ್ಯಕಂಡಿದ್ದ ಮೊದಲ ಟೆಸ್ಟ್ ರೀತಿ ಎರಡನೇ ಟೆಸ್ಟ್ ಕೂಡ ಆಗದಿರಲಿ ಎಂಬುದು ಕ್ರಿಕೆಟ್ ಪಂಡಿತರ ಆಶಯ. ಆದರೆ ಟೀಂ ಇಂಡಿಯಾ ಪರಿಸ್ಥಿತಿ ಕಂಡು ಅಭಿಮಾನಿಗಳು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ!