Wednesday, September 9, 2026

BDA Apartments

Home Front Page ಯುಎಸ್ ಓಪನ್’ನಲ್ಲಿ ಪಾಲ್ಗೊಳ್ಳದಿರಲು ಫೆಡರರ್ ನಿರ್ಧಾರ

ಯುಎಸ್ ಓಪನ್’ನಲ್ಲಿ ಪಾಲ್ಗೊಳ್ಳದಿರಲು ಫೆಡರರ್ ನಿರ್ಧಾರ

ಬೆಂಗಳೂರು, ಆಗಸ್ಟ್ 16, 2021 (www.justkannada.in): ಯುಎಸ್ ಓಪನ್ ಪಾಲ್ಗೊಳ್ಳದಿರಲು ರೋಜರ್ ಫೆಡರರ್‌ ನಿರ್ಧರಿಸಿದ್ದಾರೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡುವುದರ ಮೂಲಕ ಫೆಡರರ್‌ ಈ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ರೋಜರ್ ಫೆಡರರ್ 2 ಸುತ್ತಿನ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ

2 ವರ್ಷಗಳ ವಿಶ್ರಾಂತಿಯನ್ನು ತೆಗೆದುಕೊಂಡು ರೋಜರ್ ಫೆಡರರ್ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಹೌದು ಫ್ರೆಂಚ್ ಓಪನ್ 2021 ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ರೋಜರ್ ಫೆಡರರ್ ಅರ್ಧಕ್ಕೆ ಹಿಂದೆ ಸರಿದಿದ್ದರು.

ವ್ರವಾದ ಮಂಡಿ ಗಾಯದ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಜರ್ ಫೆಡರರ್ ವಿಶ್ರಾಂತಿ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.