Sunday, August 2, 2026

BDA Apartments

Home Front Page ಶಾಲೆಗಳನ್ನ ಆರಂಭಿಸುವಂತೆ ಸಿಎಂ ಬೊಮ್ಮಾಯಿಗೆ  ಖಾಸಗಿ ಶಾಲೆಗಳ ಒಕ್ಕೂಟ ಡೆಡ್ ಲೈನ್.

ಶಾಲೆಗಳನ್ನ ಆರಂಭಿಸುವಂತೆ ಸಿಎಂ ಬೊಮ್ಮಾಯಿಗೆ  ಖಾಸಗಿ ಶಾಲೆಗಳ ಒಕ್ಕೂಟ ಡೆಡ್ ಲೈನ್.

ಬೆಂಗಳೂರು,ಜುಲೈ,29,2021(www.justkannada.in):  ಸರ್ಕಾರಿ ಶಾಲೆಗಳನ್ನ ತೆರೆಯಲು ಸೂಚನೆ ನೀಡಿ . ಇಲ್ಲದಿದ್ದರೇ ನಾವೇ ಖಾಸಗಿ ಶಾಲೆಗಳನ್ನ ತೆರೆಯುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ  ಖಾಸಗಿ ಶಾಲೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.jk

ಈ ಕುರಿತು ಮಾತನಾಡಿರುವ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಹಾವನೂರು ಲೇಪಾಕ್ಷಿ, ಜುಲೈ 30ರೊಳಗೆ ಶಾಲೆಗಳನ್ನ ಆರಂಭಿಸಬೇಕು. ಸರ್ಕಾರಿ ಶಾಲೆಗಳನ್ನ ಆರಂಭಿಸಲು ಸೂಚನೆ ನೀಡಬೇಕು. ಇಲ್ಲದಿದ್ದರೇ ನಾವೇ ಆಗಸ್ಟ್ 2ರಿಂದ ಖಾಸಗಿ ಶಾಲೆಗಳನ್ನ ತೆರಯಲು ಮುಂದಾಗುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಡೆಡ್ ಲೈನ್ ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಹೆಚ್ಚಾದ ಹಿನ್ನೆಲೆ ಶಾಲಾ ಕಾಲೇಜುಗಳನ್ನ ಬಂದ್ ಮಾಡಲಾಗಿತ್ತು. ಇದೀಗ ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನ ತೆರೆಯಲು ಸರ್ಕಾರ ಮುಂದಾಗಿದೆ.

Key words: CM- Bommai – private schools union- deadline – schools – start.