Tuesday, September 22, 2026

BDA Apartments

ಪದವಿ ಕಾಲೇಜು ಆರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್: ಜುಲೈ 26ರಿಂದ ತರಗತಿ ಶುರು BDA J...
Home Front Page ಪದವಿ ಕಾಲೇಜು ಆರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್: ಜುಲೈ 26ರಿಂದ ತರಗತಿ ಶುರು

ಪದವಿ ಕಾಲೇಜು ಆರಂಭಕ್ಕೆ ಸರಕಾರ ಗ್ರೀನ್ ಸಿಗ್ನಲ್: ಜುಲೈ 26ರಿಂದ ತರಗತಿ ಶುರು

ಬೆಂಗಳೂರು, ಜುಲೈ 18, 2021 (www.justkannada.in): ಪದವಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರಕಾರ ಕೊನೆಗೂ ಅನುಮತಿ ನೀಡಿದೆ.

ಜುಲೈ 26 ರಿಂದ ಪದವಿ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿದ್ದು, ವಿದ್ಯಾರ್ಥಿಗಳು ಕೊರೊನಾ ಲಸಿಕೆ ಮೊದಲ ಡೋಸ್ ಪಡೆದಿರಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.

ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ರಷ್ಟು ಪ್ರೇಕ್ಷಕರೊಂದಿಗೆ ಚಿತ್ರಮಂದಿರಗಳ ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಜುಲೈ 26 ರಿಂದ ಪದವಿ ತರಗತಿಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಮೊದಲ ಕೊರೊನಾ ಲಸಿಕೆ ಕಡ್ಡಾಯ ಮಾಡಲಾಗಿದೆ.  ಜುಲೈ 26 ರಿಂದ ಪದವಿ ತರಗತಿಗಳು ಆಫ್ ಲೈನ್ ಕ್ಲಾಸ್ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.