Sunday, August 23, 2026

BDA Apartments

Home Front Page ಕೊರೊನಾ ಮೀಟರ್: ದೇಶದಲ್ಲಿ 41,157 ಹೊಸ ಕೋವಿಡ್ ಪ್ರಕರಣ

ಕೊರೊನಾ ಮೀಟರ್: ದೇಶದಲ್ಲಿ 41,157 ಹೊಸ ಕೋವಿಡ್ ಪ್ರಕರಣ

ಬೆಂಗಳೂರು, ಜುಲೈ 18, 2021 (www.justkannada.in): ದೇಶದಲ್ಲಿ ಭಾನುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ 41,157 ಹೊಸ ಕೋವಿಡ್‌ ‍ಪ್ರಕರಣ ದೃಢಪಟ್ಟಿವೆ.

518 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 3,11,06,065ಕ್ಕೆ ಏರಿಕೆಯಾಗಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 4,22,660ಕ್ಕೆ ಇಳಿಕೆಯಾಗಿದೆ. ಇದು ಒಟ್ಟು ಪ್ರಕರಣಗಳ ಪೈಕಿ ಶೇಕಡ 1.36 ರಷ್ಟಿದೆ.

ಶನಿವಾರ 19,36,709 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಈವರೆಗೆ ದೇಶದಲ್ಲಿ 44,39,58,663 ಪರೀಕ್ಷೆಗಳನ್ನು ನಡೆಸಲಾಗಿದೆ.

3,02,69,796 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ಧಾರೆ. ಸಾವಿನ ಪ್ರಮಾಣವು ಶೇಕಡ 1.33 ರಷ್ಟಿದೆ. ದೇಶದಲ್ಲಿ ಈವರೆಗೆ 40.49 ಕೋಟಿ ಡೋಸ್‌ ಲಸಿಕೆಗಳನ್ನು ನೀಡಲಾಗಿದೆ.