Sunday, September 20, 2026

BDA Apartments

ಸಿದ್ಧರಾಮಯ್ಯ ನುಡಿದಂತೆ ನಡೆದಿದ್ದಾರೆ: ಬೇಕಿದ್ರೆ ನಳೀನ್ ಕುಮಾರ್ ಕಟೀಲ್ ಈ ಬ...
Home Front Page ಸಿದ್ಧರಾಮಯ್ಯ ನುಡಿದಂತೆ ನಡೆದಿದ್ದಾರೆ: ಬೇಕಿದ್ರೆ ನಳೀನ್ ಕುಮಾರ್ ಕಟೀಲ್ ಈ ಬಗ್ಗೆ ನೇರ ಚರ್ಚೆಗೆ ಬರಲಿ-...

ಸಿದ್ಧರಾಮಯ್ಯ ನುಡಿದಂತೆ ನಡೆದಿದ್ದಾರೆ: ಬೇಕಿದ್ರೆ ನಳೀನ್ ಕುಮಾರ್ ಕಟೀಲ್ ಈ ಬಗ್ಗೆ ನೇರ ಚರ್ಚೆಗೆ ಬರಲಿ- ಡಿ.ಕೆ ಶಿವಕುಮಾರ್

ಚಿತ್ರದುರ್ಗ,ಜುಲೈ,15,2021(www.justkannada.in):  ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ, ಮಾತು ತಪ್ಪಿಲ್ಲ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಪೈಕಿ ಶೇ.99ರಷ್ಟು  ಈಡೇರಿಸಿದ್ದಾರೆ. ಈ ಬಗ್ಗೆ ಬೇಕಿದ್ದರೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚರ್ಚೆಗೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಹ್ವಾನಿಸಿದರು.jk

ಮಾಜಿ ಸಿಎಂ ಸಿದ್ಧರಾಮಯ್ಯ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ನಳಿನ್ ಕುಮಾರ್ ಕಟೀಲ್ ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್,  ಬಸವ ಜಯಂತಿ ದಿನ ಪ್ರಮಾಣ ವಚನ ಸ್ವೀಕರಿಸಿ ವಿಧಾನಸೌಧ ಪ್ರವೇಶ ಮಾಡಿದ್ದ  ಸಿದ್ಧರಾಮಯ್ಯ ಅವರು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪೈಕಿ ಶೇ.99ರಷ್ಟು ಕೆಲಸ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೇಕಿದ್ದರೆ ಈ ಬಗ್ಗೆ ನೇರ ಚರ್ಚೆಗೆ ಬರಲಿ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಮ್ಯಾಸಿಕಲ್ ಚೇರ್ ಆಟ ನಡೆಯುತ್ತಿದೆ ಎಂದ ನಳಿನ್ ಕಟೀಲ್ ಗೆ ತಿರುಗೇಟು ನೀಡಿದ ಅವರು,ಕಾಂಗ್ರೆಸ್ ನಲ್ಲಿ ಮ್ಯೂಸಿಕಲ್ ಚೇರ್ ಆಟ ನಡೆಯುತ್ತಿದೆಯೋ, ಬೇರೆ ಯಾವುದೋ. ಆದರೆಬಿಜೆಪಿಯಲ್ಲಿ ನಡೆಯುತ್ತಿದೆಯಲ್ಲ ಅದು ಯಾವ ಚೇರ್ ಆಟ ಎಂದು ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.

 

Key words: former CM-Siddaramaiah-KPCC-president-  DK Sivakumar-tong-nalin kumar katil