Tuesday, August 4, 2026

BDA Apartments

Home Front Page HUMANITY “ಮೊದಲು ಮಾನವನಾಗು” ಕಿರುಚಿತ್ರ ಬಿಡುಗಡೆ.

HUMANITY “ಮೊದಲು ಮಾನವನಾಗು” ಕಿರುಚಿತ್ರ ಬಿಡುಗಡೆ.

ಮೈಸೂರು,ಜೂನ್,27,2021(www.justkannada.in): ಯುವ ಮಾಧ್ಯಮ ಮಿತ್ರರ ತಂಡದಿಂದ ನಿರ್ಮಾಣಗೊಂಡಿರುವ HUMANITY “ಮೊದಲು ಮಾನವನಾಗು” ಕಿರುಚಿತ್ರವನ್ನ ಬಿಡುಗಡೆ ಮಾಡಲಾಯಿತು.

 

ಕೊರೊನಾ ಸಂಧರ್ಭದಲ್ಲಿ ಮಾನವೀಯತೆಯ ಸಂದೇಶ ಸಾರುವ ಕಿರುಚಿತ್ರ ಇದಾಗಿದೆ. ಪತ್ರಕರ್ತ ಲೋಹಿತ್ ಹನುಮಂತಪ್ಪ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಕಿರುಚಿತ್ರ ಬಿಡುಗಡೆ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕಾರ್ಯಕ್ರಮ ನಡೆಯಿತು.jk

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಮಾಜಿ ಅಧ್ಯಕ್ಷ ಕೆ ದೀಪಕ್, ಚಲನಚಿತ್ರ ನಿರ್ದೇಶಕ ಪ್ರವೀಣ್ ಕೃಪಾಕರ್, ನಿರ್ಮಾಪಕ ಮತ್ತು ಸಮಾಜಸೇವಕ ಹರ್ಷವರ್ಧನ್ ಗೌಡ ಭಾಗಿಯಾಗಿದ್ದರು.

ಕಿರುಚಿತ್ರ ಬಿಡುಗಡೆಗೂ ಮೊದಲು ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.

Key words: HUMANITY-modalu manavanagu- released -short film- mysore-press club