Wednesday, October 7, 2026

BDA Apartments

MLC BDA JK_Adv BDA Adv
Home Front Page ಟೆಸ್ಟ್ ಚಾಂಪಿಯನ್’ಶಿಪ್: ಗೆಲುವಿಗಾಗಿ ಬೆವರು ಹರಿಸುತ್ತಿದೆ ಟೀಂ ಇಂಡಿಯಾ

ಟೆಸ್ಟ್ ಚಾಂಪಿಯನ್’ಶಿಪ್: ಗೆಲುವಿಗಾಗಿ ಬೆವರು ಹರಿಸುತ್ತಿದೆ ಟೀಂ ಇಂಡಿಯಾ

ಬೆಂಗಳೂರು, ಜೂನ್ 12, 2021 (www.justkannada.in): ಟೀಂ ಇಂಡಿಯಾ ಆಟಗಾರರು ಸೌತಾಂಪ್ಟನ್‌ ಅಂಗಳದಲ್ಲಿ ಬ್ಯಾಟಿಂಗ್‌, ಫೀಲ್ಡಿಂಗ್‌ ಮತ್ತು ಬೌಲಿಂಗ್‌ ಅಭ್ಯಾಸ ನಡೆಸಿದ್ದಾರೆ.

ಹೌದು  ಕಿವೀಸ್‌ ವಿರುದ್ಧ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಟೀಮ್‌ ಇಂಡಿಯಾ ಭರ್ಜರಿ ಅಭ್ಯಾಸ ಆರಂಭಿಸಿದೆ.

ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ತಂಡದ ಆಟಗಾರರನ್ನು ಎರಡು ತಂಡಗಳನ್ನಾಗಿ ವಿಂಗಡಿಸಿ ಚತುರ್ದಿನ ಪಂದ್ಯ ನ್ನಾಡಿಸಲಾಗುವುದು.

ಇದರಿಂದ ಇಂಗ್ಲೆಂಡ್‌ ವಾತಾವರಣಕ್ಕೆ ಹೊಂದಿಕೊಳ್ಳಬಹುದು ಎನ್ನುವುದು ಕೋಚ್‌ ರವಿಶಾಸ್ತ್ರಿಯವರ ಯೋಜನೆಯಾಗಿದೆ.

ಮೊಹಮ್ಮದ್‌ ಶಮಿ, ಬುಮ್ರಾ, ಸಿರಾಜ್‌ ಬೌಲಿಂಗ್‌ ಅಭ್ಯಾಸ ನಡೆಸಿದರೆ, ನಾಯಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಪಂತ್‌, ಪೂಜಾರ ನೆಟ್‌ ಪ್ರ್ಯಾಕ್ಟೀಸ್‌ ಮುಗಿಸಿದ್ದಾರೆ.