Sunday, August 23, 2026

BDA Apartments

Home Cinema ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಜತೆ ಕಿಚ್ಚ ಪೈಪೋಟಿ !

ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಜತೆ ಕಿಚ್ಚ ಪೈಪೋಟಿ !

ಬೆಂಗಳೂರು, ಜೂನ್ 12, 2021 (www.justkannada.in): ನಟ ಕಿಚ್ಚ ಸುದೀಪ್ ಚೆಸ್ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಅಂದಹಾಗೆ ಅವರು ಸೆಣೆಸಾಡುತ್ತಿರುವುದು ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ವಿರುದ್ಧ!

ಹೌದು. ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್ ಡಾಟ್ ಕಾಮ್ ಸೆಲೆಬ್ರಿಟಿ ಆವೃತ್ತಿ ನಡೆಸುತ್ತಿದೆ. ಇದರಲ್ಲಿ ಕಿಚ್ಚ ಸುದೀಪ್ ಅವರಿಗೂ ಆಹ್ವಾನ ಬಂದಿದೆಯಂತೆ.

ನಟರಾದ ಕಿಚ್ಚ ಸುದೀಪ್, ಅಮೀರ್ ಖಾನ್, ರಿತೇಶ್ ದೇಶಮುಖ್ ಕ್ರಿಕೆಟ್ ಆಟಗಾರರಾದ ಯಜುವೇಂದ್ರ ಚಹಾಲ್, ಗಾಯಕಿ ಅನನ್ಯ ಬಿರ್ಲಾ ಸೇರಿದಂತೆ ಹಲವರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ.

ಜೂನ್ 13 ರಂದು ಭಾನುವಾರ ಸಂಜೆ 5 ರಿಂದ 8 ಗಂಟೆಯವರೆಗೆ ಸ್ಪರ್ಧೆ ನಡೆಯಲಿದ್ದು, ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸ್ಪರ್ಧೆ ಆಯೋಜಿಸಲಾಗಿದೆ.