Wednesday, October 7, 2026

BDA Apartments

Home Front Page EVM ಪರಿಚಯಿಸಿದ್ದು ಕಾಂಗ್ರೆಸ್ ಕಾಲದಲ್ಲಿ ಅಲ್ವಾ? ಪ್ರತಾಪ್ ಸಿಂಹ ಟಾಂಗ್

EVM ಪರಿಚಯಿಸಿದ್ದು ಕಾಂಗ್ರೆಸ್ ಕಾಲದಲ್ಲಿ ಅಲ್ವಾ? ಪ್ರತಾಪ್ ಸಿಂಹ ಟಾಂಗ್

ಹಾಸನ, ಅಕ್ಟೋಬರ್,7,2026 (www.justkannada.in): ಇವಿಎಂ ಪರಿಚಯಿಸಿದ್ದು ಕಾಂಗ್ರೆಸ್ ಕಾಲದಲ್ಲಿ ಅಲ್ಲವಾ ?  ಎಲ್ಲಾ ರಾಜ್ಯಗಳಲ್ಲೂ ಜನರು ಕಾಂಗ್ರೆಸ್ ತಿರಸ್ಕಾರ ಮಾಢಿದ್ದಾರೆ. ಹಾಗಾಗಿ ಹೊಸ ನಾಟಕ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಎಸ್ ಐಆರ್ ಮುಖ್ಯ  ಎಂದು ಇಡೀ ದೇಶಾದ್ಯಂತ ಮಾಡುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲಿ ಕೊನೆಯ ಹಂತಕ್ಕೆ ಎಸ್ ಐಆರ್ ಬಂದಿದೆ.  ನಿಮ್ಮ ವೋಟ್ ಮಿಸ್ ಆಗಿದ್ದರೆ ಒಂದು ದಾಖಲೆ ಇದ್ದರೇ ಸಾಕು.  ಎಸ್ ಐಆರ್ ಆದ ಮೇಲೆ ಕೇರಳದಲ್ಲಿ ಕಾಂಗ್ರೆಸ್ ಗೆಲ್ಲಲು ಆಗಿದ್ದು ಈ ಬಗ್ಗೆ ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಕಡೆ ಹೋಗಿ ಬೊಬ್ಬೆ ಹಾಕುತ್ತಾರೆ ಎಂದು ಕಾಲೆಳೆದರು.EVM prathap simha

ಸಿಎಂ  ಡಿಕೆ ಶಿವಕುಮಾರ್ ಎಸ್ ಐಆರ್ ಬಂದಾಗ ಮೈಸೂರಿನಲ್ಲಿ ಕಾರ್ಯಕ್ರಮ ಮಾಡಿದ್ದಾರೆ.  2028ಕ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತೆ. ಎಫ್ ಐಆರ್ ಹಾಕಿರುವುದನ್ನ ಕಾನೂನಾತ್ಮಕವಾಗಿ ಎದುರಿಸುತ್ತೇವೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಎಫ್ಐಆರ್ ಹಾಕಿದ್ದಾರೆ ಎಂದು ಹರಿಹಾಯ್ದರು.EVM jk02_new jk02 new

Key words: EVM, introduced, Congress era, ‍Former MP, Pratap Simha

English Summary
Title

Who Introduced EVM in India? The Congress Era and BJP's Stance

Short Description
Electronic Voting Machines (EVMs) were introduced in India during the Congress era, a historical fact frequently highlighted by BJP leaders like former Mysuru MP Pratap Simha to counter opposition doubts. EVMs were first trialed in 1982 under Indira Gandhi's government. Later, the Rajiv Gandhi administration amended the Representation of the People Act in 1988 to legally authorize their use. By the 2004 Lok Sabha elections, the technology saw a complete nationwide rollout under the Congress-led UPA. This structural timeline proves that India's digital voting shift was fully established well before the current leadership.
Keywords
EVM, introduced, Congress era, ‍Former MP, Pratap Simha