Sunday, August 23, 2026

BDA Apartments

Home Front Page ದೇಶದಲ್ಲಿ ಇಳಿಕೆಯತ್ತ ಕೊರೋನಾ ಸೋಂಕಿನ ಪ್ರಮಾಣ: ಒಂದೇ ದಿನದಲ್ಲಿ 84,332 ಕೋವಿಡ್ ಪಾಸಿಟಿವ್ ಪತ್ತೆ

ದೇಶದಲ್ಲಿ ಇಳಿಕೆಯತ್ತ ಕೊರೋನಾ ಸೋಂಕಿನ ಪ್ರಮಾಣ: ಒಂದೇ ದಿನದಲ್ಲಿ 84,332 ಕೋವಿಡ್ ಪಾಸಿಟಿವ್ ಪತ್ತೆ

ನವದೆಹಲಿ,ಜೂನ್,12,2021(www.justkannada.in):  ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆ, ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. 2 ಲಕ್ಷ ದಾಟುತ್ತಿದ್ದ ದಿನದ ಕೋವಿಡ್ ಪ್ರಕರಣ ಇದೀಗ  ಕಡಿಮೆಯಾಗಿದೆ.jk

ಕಳೆದ 24 ಗಂಟೆಗಳಲ್ಲಿ 84,332 ಮಂದಿಗೆ ಕೊರೋನಾ ಪಾಸಿಟಿವ್  ಕಂಡು ಬಂದಿದ್ದು ಈ ಮೂಲಕ ಕೊರೋನಾ ಸೋಂಕಿತರ ಸಂಖ್ಯೆ 2,93,59,155ಕ್ಕೆ ಏರಿಕೆಯಾಗಿದೆ.  ಕಳೆದ 24 ಗಂಟೆಯಲ್ಲಿ 4002 ಮಂದಿ ಕೊರೋನಾಗೆ ಬಲಿಯಾಗಿದ್ದು, ಕೋವಿಡ್ ಗೆ ಬಲಿಯಾದವರ ಸಂಖ್ಯೆ 3,67081ಕ್ಕೆ ಏರಿಕೆಯಾಗಿದೆ.

ಇನ್ನು ಒಂದೇ ದಿನದಲ್ಲಿ 1,21,311 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 2,79,11,384 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 10,80,690 ಸಕ್ರಿಯ ಪ್ರಕರಣಗಳಿವೆ.

Key words: Corona -infection rate – country- 84,332 covid positive- detection – single day