Wednesday, October 7, 2026

BDA Apartments

Sting Operation BDA JK_Adv BDA Adv
Home Front Page ಸ್ಟಿಂಗ್ ಆಪರೇಷನ್: ಸಿಎಂ ಡಿಕೆಶಿ ಎಚ್ಚರಿಕೆಗೆ ಡಿ.ವಿ ಸದಾನಂದಗೌಡರು ವ್ಯಂಗ್ಯ

ಸ್ಟಿಂಗ್ ಆಪರೇಷನ್: ಸಿಎಂ ಡಿಕೆಶಿ ಎಚ್ಚರಿಕೆಗೆ ಡಿ.ವಿ ಸದಾನಂದಗೌಡರು ವ್ಯಂಗ್ಯ

ಮಂಡ್ಯ, ಅಕ್ಟೋಬರ್,7,2026 (www.justkannada.in): ಸಚಿವರ ವಿರುದ್ದ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ಬಗ್ಗೆ ಮಾಜಿ ಸಿಎಂ ಡಿ.ವಿ ಸದಾನಂದಗೌಡರು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ವಿ ಸದಾನಂದಗೌಡರು, ಇದು ಅಲಿಬಾಬ 40 ಕಳ್ಳರಿಗೆ ಹೇಳಿದಂತೆ . ಕಳ್ಳತನ ಇಲ್ಲದಿದ್ದರೇ ಈ ರೀತಿ ಹೇಳುವ ಅವಶ್ಯಕತೆ ಏನಿದೆ? ಹಣ ಹೊಡೆಯುವಾಗ ಜಾಗರೂಕತೆಯಿಂದ ಇರಲು ಹೇಳಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಗೆ  ಆತಂಕ. ನೀವು ಯಾವುದೇ ತಪ್ಪು ಅಥವಾ ಕಳ್ಳತನ ಮಾಡದಿದ್ದರೆ, ಸ್ಟಿಂಗ್ ಆಪರೇಷನ್‌ ಗೆ ಹೆದರುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು.Sting Operation dvs

ನಿನ್ನೆ  ಸಚಿವ ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್  ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರಸ್ತಾಪಿಸಿ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಖಾಸಗಿ ಸಂಸ್ಥೆಗಳಿಂದ ಸಚಿವರ ಸ್ಟಿಂಗ್ ಆಪರೇಷನ್ ನಡೀತಿದೆ. ನಿಮ್ಮ ನಡೆ , ನುಡಿ ಎಲ್ಲವೂ ಜಾಗೃತವಾಗಿರಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.D.V. Sadananda Gowda jk02_new jk02 new

 

English Summary
Title

BJP Mocks Karnataka CM DK Shivakumar Over Cabinet Sting Operation Alerts

Short Description
BJP leaders, including D.V. Sadananda Gowda, have mocked Karnataka Chief Minister D.K. Shivakumar over reports that private agencies are targeting Congress ministers with secret sting operations. During a cabinet meeting, Chief Minister Shivakumar warned colleagues to be highly vigilant regarding their private movements, visits, and conversations. However, the opposition strongly rejected the narrative, mocking it as a sign of internal paranoia and distrust. Union Minister H.D. Kumaraswamy even turned the tables, alleging that Shivakumar himself orchestrates these sting operations to maintain absolute control over his cabinet and senior leadership.
Keywords
Sting Operation, D.V. Sadananda Gowda, mocks, CM DK Shivakumar