Tuesday, September 22, 2026

BDA Apartments

ಮಡಿಕೇರಿಯಲ್ಲಿ ಶೀಘ್ರವೇ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಕೇಂದ್ರ ಸಚಿ...
Home Front Page ಮಡಿಕೇರಿಯಲ್ಲಿ  ಶೀಘ್ರವೇ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ಪ್ರತಾಪ್ ಸಿಂಹ…

ಮಡಿಕೇರಿಯಲ್ಲಿ  ಶೀಘ್ರವೇ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ಪ್ರತಾಪ್ ಸಿಂಹ…

ನವದೆಹಲಿ,ಜು,11,2019(www.justkannada.in): ಮಡಿಕೇರಿಯಲ್ಲಿ  ಶೀಘ್ರವೇ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಮಡಿಕೇರಿಯಲ್ಲಿ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಮತದಾರರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಇಂದು ಸಚಿವರಾದ ಸದಾನಂದ ಗೌಡ  ಪಿಯುಷ್ ಘೋಯಲ್, ಶಾಸಕ  ಅಪ್ಪಚ್ಚುರಂಜನ್ ಹಾಗೂ ಸಂಸದ ತೇಜಸ್ವಿ ಸೂರ್ಯ , ಪ್ರತಾಪ್ ಸಿಂಹ ನಿಯೋಗ ಇಂದು  ಕೇಂದ್ರ ಆರೋಗ್ಯ ಖಾತೆ ಸಚಿವ  ಡಾ.ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಮಡಿಕೇರಿಯಲ್ಲಿ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವ ಸಂಬಂಧವಾಗಿ ಮನವಿ ಮಾಡಿದರು.

Key words: Pratap simha-appealed – Union Minister – open -emergency hospital – Madikeri