Tuesday, August 4, 2026

BDA Apartments

Home Cinema ‘ಬಿಗ್’ಬಾಸ್’ ಮನೆಗೆ ಹೋಗಲು ಬಯಸಿದೆ ‘ಹಳ್ಳಿಹಕ್ಕಿ’!

‘ಬಿಗ್’ಬಾಸ್’ ಮನೆಗೆ ಹೋಗಲು ಬಯಸಿದೆ ‘ಹಳ್ಳಿಹಕ್ಕಿ’!

ಬೆಂಗಳೂರು, ಮಾರ್ಚ್ 03, 2021 (www.justkannada.in): ನಾನು ಬಿಗ್‌ ಬಾಸ್‌ ಮನೆಗೆ ಹೋಗಲು ಆಸೆಪಟ್ಟಿದ್ದೇನೆ. ನನ್ನ ಸ್ನೇಹಿತರು ಬಿಗ್‌ ಬಾಸ್‌ ಮನೆಗೆ ಹೋಗಲು ಹೇಳುತ್ತಿದ್ದಾರೆ ಎಂದಿದ್ದಾರೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ !

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಗ್ ಬಾಸ್ ಆಯೋಜಕರು ಅವಕಾಶ ಕೊಟ್ಟರೆ ವಿಶೇಷ ಆಹ್ವಾನಿತರಾಗಿ ಆಹ್ವಾನ ಬಂದರೆ ಹೋಗುತ್ತೇನೆ ಎಂದು ಎಚ್ವಿ ಹೇಳಿದ್ದಾರೆ.

ನಾಲ್ಕೈದು ದಿನಗಳ ಮಟ್ಟಿಗೆ ಬಿಗ್‌ ಬಾಸ್‌ ಮನೆಗೆ ವಿಶೇಷ ಅತಿಥಿಯಾಗಿ ಕರೆದರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ಬಿಗ್‌ ಬಾಸ್‌ ಸೀಸನ್‌ 6 ರ ವೇಳೆ ಪರಮೇಶ್ವರ್‌ ಗುಂಡ್ಕಲ್‌ ಬಿಗ್‌ ಬಾಸ್‌ಗೆ ಆಹ್ವಾನಿಸಿದ್ದರು. ಆದರೆ, ಆಗ ಅನಾರೋಗ್ಯದಿಂದ ಹೋಗಿರಲಿಲ್ಲ. ಈಗ ಅವಕಾಶ ಸಿಕ್ಕರೆ ನಾನು ರೆಡಿ ಎಂದಿದ್ದಾರೆ.