Sunday, September 20, 2026

BDA Apartments

ಜೆಡಿಎಸ್ ಅನ್ನು ಯಾವುದೇ‌ ಕಾರಣಕ್ಕೂ ನಂಬುವಂತಿಲ್ಲ- ಸಚಿವ ಸಿ.ಪಿ ಯೋಗೇಶ್ವರ್…...
Home Front Page ಜೆಡಿಎಸ್ ಅನ್ನು ಯಾವುದೇ‌ ಕಾರಣಕ್ಕೂ ನಂಬುವಂತಿಲ್ಲ- ಸಚಿವ ಸಿ.ಪಿ ಯೋಗೇಶ್ವರ್…

ಜೆಡಿಎಸ್ ಅನ್ನು ಯಾವುದೇ‌ ಕಾರಣಕ್ಕೂ ನಂಬುವಂತಿಲ್ಲ- ಸಚಿವ ಸಿ.ಪಿ ಯೋಗೇಶ್ವರ್…

ಮೈಸೂರು,ಮಾರ್ಚ್,2,2021(www.justkannada.in): ಜೆಡಿಎಸ್‌ಗೆ ಶಕ್ತಿ ತುಂಬಿದ್ರೆ ಅದು ನಮಗೆ ಮಾರಕ. ಜೆಡಿಎಸ್ ಅನ್ನು ಯಾವುದೇ‌ ಕಾರಣಕ್ಕೂ ನಂಬುವಂತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ವಾಗ್ದಾಳಿ ನಡೆಸಿದರು.jk

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ  ಮತ್ತು  ತಮ್ಮ ನಡುವಿನ ಟಾಕ್ ವಾರ್ ವಿಚಾರ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸಿ.ಪಿ ಯೋಗೇಶ್ವರ್,  ಕುಮಾರಸ್ವಾಮಿ ನನ್ನ ಬಗ್ಗೆ ವೈಯಕ್ತಿಕವಾಗಿ ಕೀಳಾಗಿ ಮಾತನಾಡುತ್ತಿದ್ದರು. ಈ ರೀತಿ ಮಾತನಾಡದಂತೆ ನಾಲ್ಕು ಜನರ ಬಳಿ ಹೇಳಿ ಕಳುಹಿಸಿದೆ. ಆದರೂ ಅವರು ಅದನ್ನು ಮುಂದುವರಿಸಿದರು. ನನಗೆ ತುಂಬಾ ಘಾಸಿ ಆಯ್ತು, ಅದೇ ಕಾರಣಕ್ಕೆ ನಾನು ಸಹ ಮಾತನಾಡಿದೆ ಎಂದು ಸ್ಪಷ್ಟನೆ ನೀಡಿದರು.

ರಾಜಕಾರಣದಲ್ಲಿ ವೈಯಕ್ತಿಕ ಟೀಕೆ ತಪ್ಪು, ನನಗೂ ಗೊತ್ತಿದೆ. ಅದನ್ನು ನೀವು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಹೇಳಿದರೆ ಒಳ್ಳೆಯದು ಎಂದು ತಿಳಿಸಿದ ಸಚಿವ ಸಿಪಿ ಯೋಗೇಶ್ವರ್, ನೀರಿನ ಪೈಪ್ ಲೆಟರ್ ಹೆಡ್‌ ನಲ್ಲಿ ದುಡ್ಡು ಮಾಡುತ್ತಾನೆ ಎಂದು ಆರೋಪ ಮಾಡುತ್ತಾರೆ. ಹಾಗಾದರೇ ನಮ್ಮ ಕಾರ್ಯಕರ್ತರಿಗೆ ಶಿಫಾರಸು ಮಾಡಬಾರದಾ.? ಅದನ್ನು ಟೀಕೆ ಮಾಡಿದರೆ ಹೇಗೆ.? ಆದ್ದರಿಂದ ತಡೆದುಕೊಳ್ಳಲು ಆಗದೆ ವೈಯಕ್ತಿಕವಾಗಿ ಟೀಕೆ ಮಾಡಿದ್ದೇನೆ ಎಂದರು.jds-cannot-trusted-any-reason-minister-c-p-yogeshwar

ಜೆಡಿಎಸ್‌ಗೆ ಶಕ್ತಿ ತುಂಬಿದ್ರೆ ಅದು ನಮಗೆ ಮಾರಕ. ಜೆಡಿಎಸ್ ಅನ್ನು ಯಾವುದೇ‌ ಕಾರಣಕ್ಕೂ ನಂಬುವಂತಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕಟ್ಟೋದು ನನ್ನ ಸಂಕಲ್ಪ. ಈ ವಿಚಾರವನ್ನು ನಾನು ವರಿಷ್ಠರ ವೇದಿಕೆಯಲ್ಲಿ ಮಾತಾಡುತ್ತೇನೆ. ಮಹಾಘಟಬಂಧನ್ ಮಾಡಿಕೊಂಡು ದೇಶ ಆಳಲು ಹೊರಟಿದ್ದರು. ಹಾಗಾಗಿ ಜೆಡಿಎಸ್‌ ಅನ್ನು ನಾವು ನಂಬುವಂತಿಲ್ಲ ಎಂದು ಸಚಿವ ಸಿಪಿ ಯೋಗೇಶ್ವರ್ ಲೇವಡಿ ಮಾಡಿದರು.

Key words: JDS- cannot – trusted – any reason- Minister- C.P. Yogeshwar.