Wednesday, August 5, 2026

BDA Apartments

Home Front Page “ನಾನು ಟವಲ್ ಹಾಸಿದ್ರೆ ನೀನು ರಗ್ಗನ್ನೆ ಹಾಸುತ್ತಿದ್ದಿಯಲ್ಲಪ್ಪ” : ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ

“ನಾನು ಟವಲ್ ಹಾಸಿದ್ರೆ ನೀನು ರಗ್ಗನ್ನೆ ಹಾಸುತ್ತಿದ್ದಿಯಲ್ಲಪ್ಪ” : ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಜನವರಿ,01,2021(www.justkannada.in) : ನಾನು ಟವಲ್ ಹಾಸಿದ್ರೆ ನೀನು ರಗ್ಗನ್ನೆ ಹಾಸುತ್ತಿದ್ದಿಯಲ್ಲಪ್ಪ.  ಬಿಜೆಪಿ ಪಕ್ಷಕ್ಕೆ ನೀನು ಕಂಬಳಿಯನ್ನೆ ಹಾಕಿದ್ದಿಯಲ್ಲಪ್ಪ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಏಕವಚನದಲ್ಲೆ ವಾಗ್ದಾಳಿ ನಡೆಸಿದರು.jk

ಕೆ.ಆರ್.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೊಂದು ಪಕ್ಷ ಇದ್ದರೆ ಅದಕ್ಕೂ ಎಚ್.ವಿಶ್ವನಾಥ್ ಟವೆಲ್ ಹಾಕುತ್ತಿದ್ದರು ಎಂಬ ಹೆಚ್‌.ಡಿ.ಕೆ ಹೇಳಿಕೆ ವಿರುದ್ಧ ಆಕ್ರೋಶವ್ಯಕ್ತತಪಡಿಸಿದರು.

ಸಮ್ಮಿಶ್ರ ಸರ್ಕಾರ ಬಿಳೋಕೆ ನಾವ್ಯಾರು ಕಾರಣರಲ್ಲ

ಸಿದ್ದರಾಮಯ್ಯ ಜೆಡಿಎಸ್ ಪಕ್ಷ, ಪಕ್ಷವೇ ಅಲ್ಲ ಎಂದು ಹೇಳಿದ್ದಾರೆ.  ಇತ್ತ ಕುಮಾರಸ್ವಾಮಿ ನಾನು ಸಮ್ಮಿಶ್ರ ಸರ್ಕಾರದಲ್ಲಿ ಕ್ಲರ್ಕ್‌ ಆಗಿದ್ದೆ ಎಂದಿದ್ದಾರೆ.  ಇದರಲ್ಲೆ ಗೊತ್ತಾಗುತ್ತೆ ಸಮ್ಮಿಶ್ರ ಸರ್ಕಾರ ಬಿಳೋಕೆ ನಾವ್ಯಾರು ಕಾರಣರಲ್ಲ ಅಂತ? ಎಂದು ಕಿಡಿಕಾರಿದ್ದಾರೆ.

ಹಳ್ಳಿಯ ಗಾದೆಯಂತೆ ಕಂತೆಗೆ ತಕ್ಕ ಬೊಂತೆ ಎಂಬಂತೆ ಅವರವರ ಆರೋಪ, ಪ್ರತ್ಯಾರೋಪದಿಂದಲೇ ಸಮ್ಮಿಶ್ರ ಸರ್ಕಾರ ಉರುಳಿತು. ಸಗಣಿ ಹಾಗೂ ಹುಲ್ಲು ಗಾಡಿಯನ್ನ ಎತ್ತಿಕೊಂಡು ಚಿನ್ನ ಇದೆ ಅಂತ ಊರಾಚೆ ಹೋಗಿದ್ರಂತೆ.  ಬೆಳಗ್ಗೆ ಎದ್ದು ನೋಡಿದಾಗ ಒಂದು ಗಾಡಿಯಲ್ಲಿ ಸಗಣಿ ಇನ್ನೊಂದು ಗಾಡಿಯಲ್ಲಿ ಹುಲ್ಲಿನ ಸೋಪ್ಪು ಇತ್ತಂತೆ.  ಇವರ ಕಥೆಯೂ ಹಾಗೇ ಇದೆ ಎಂದು ಟೀಕಿಸಿದ್ದಾರೆ.towel,Bedtime,You're,bershit,H.D.Kumaraswamy,opposite,H.Vishwanath

ಸಮ್ಮಿಶ್ರ ಸರ್ಕಾರದಲ್ಲಿ ಯಾರ್ಯಾರಿಗೆ ಎಷ್ಟು ಗೌರವ ಇತ್ತು.  ಯಾರ್ಯಾರು ಹೇಗೆ ನಡೆದುಕೊಳ್ಳುತ್ತಿದ್ರು ಅಂತ ಅವರೇ ಸತ್ಯ ಹೇಳುತ್ತಿದ್ದಾರೆ.  ಈ ಸತ್ಯ ಕೇಳಿ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ.

key words : towel-Bedtime-You’re-bershit-H.D.Kumaraswamy-opposite-H.Vishwanath