ಬೆಂಗಳೂರು,ನವೆಂಬರ್,4,2026 (www.justkannada.in): ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿನ ಬಸ್ ಪ್ರಯಾಣದ ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಆರ್.ಅಶೋಕ್, ಬಸ್ ಟಿಕೆಟ್ ದರ ಹೆಚ್ಚಳ ವಿಚಾರ ಇದು ಪ್ರಯಾಣಿಕರ ಪಾಲಿನ ಕರಾಳ ಬಸ್ ಪ್ರಯಾಣ ದರ ಏರಿಕೆ. ದಾಖಲೆಯ ಬೆಲೆ ಏರಿಕೆ ಎಂದರೆ ಅದು ಸಾರಿಗೆ ಇಲಾಖೆಯ ಬೆಲೆ ಏರಿಕೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಆಡಳಿತವು ತುಘಲಕ್ ಸರ್ಕಾರಕ್ಕಿಂತ ಹೀನಾಯವಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಕಷ್ಟಕ್ಕೆ ದೂಡುತ್ತಿದೆ. ಕಾಂಗ್ರೆಸ್ ಮನಸೋಇಚ್ಚೆ ದರ ಹೆಚ್ಚಳ ಮಾಡುತ್ತಿದೆ ಸಾರಿಗೆ ಇಲಾಖೆಯಲ್ಲಿ ಸಾಕ್ಷಿ ಗುಡ್ಡೆಯನ್ನು ಡಿಕೆಶಿ, ಭೈರತಿ ಸುರೇಶ್ ಬಿಟ್ಟು ಹೋಗುತ್ತಿದ್ದಾರೆ. ಬೆಳಕಿನ ಹಬ್ಬಕ್ಕೆ ಕಾಂಗ್ರೆಸ್ ಪಕ್ಷ ಕಣ್ಣೀರು ತರುತ್ತಿದೆ. ಇದು ಗಬ್ಬರ್ ಟ್ಯಾಕ್ಸ್ ಜನರ ಸುಲಿಗೆ ಮಾಡುತ್ತಿದೆ. 40 % ವರೆಗೆ ಸರ್ಕಾರಿ ಬಸ್ ದರ ಏರಿಕೆ ಮಾಡಿದ್ದಾರೆ ಎಂದು ಆರ್.ಅಶೋಕ್ ಕಿಡಿಕಾರಿದರು.
Hike, government bus, fares, R. Ashoka, expresses, outrage







