Thursday, November 5, 2026

Dasara Wishes

Happy Dasara
Home Front Page ನ್ಯಾಯಾಲಯದ ತೀರ್ಪಿನಿಂದ ಅರಮನೆ ಸ್ವಾಧೀನ ವಿವಾದಕ್ಕೆ ತೆರೆ ಬೀಳುವ ವಿಶ್ವಾಸ- ಪ್ರಮೋದಾದೇವಿ ಒಡೆಯರ್

ನ್ಯಾಯಾಲಯದ ತೀರ್ಪಿನಿಂದ ಅರಮನೆ ಸ್ವಾಧೀನ ವಿವಾದಕ್ಕೆ ತೆರೆ ಬೀಳುವ ವಿಶ್ವಾಸ- ಪ್ರಮೋದಾದೇವಿ ಒಡೆಯರ್

ಜಟ್ಟಿ ಕಾಳಗ ರದ್ದು ಆತಂಕದ ವಿಚಾರವಲ್ಲ: ವರದಿ ಪಡೆದು ಸ್ಪಷ್ಟನೆ ನೀಡ್ತೇನೆ-ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್

ಮೈಸೂರು,ನವೆಂಬರ್,4,2026 (www.justkannada.in): ಅರಮನೆ ಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಸದ್ಯ ಸ್ಟೇಟಸ್‌ಕೋ ಹಂತದಲ್ಲಿದೆ. ಕೆಲವು ನ್ಯಾಯಾಲಯದ ತೀರ್ಪುಗಳು ಹೊರಬಂದರೆ ಎಲ್ಲವೂ ಸರಿಯಾಗಲಿದೆ. ಈ ಎಲ್ಲ ಗೊಂದಲಗಳಿಗೆ ನ್ಯಾಯಾಲಯದ ತೀರ್ಪೇ ಉತ್ತರವಾಗಲಿದೆ. ತೀರ್ಪಿನ ಬಳಿಕ ವಿವಾದಗಳು ಅಂತ್ಯಗೊಳ್ಳುವ ವಿಶ್ವಾಸವಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಬೆಂಗಳೂರಿನ ಅರಮನೆಗೆ ಸಂಬಂಧಿಸಿದ 460 ಎಕರೆ ಜಮೀನಿಗೆ 11 ಕೋಟಿ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿರುವ ವಿಚಾರವನ್ನೂ ಪ್ರಸ್ತಾಪಿಸಿದರು. ಇಷ್ಟು ದೊಡ್ಡ ಪ್ರಮಾಣದ ಜಮೀನಿಗೆ 11 ಕೋಟಿ ರೂಪಾಯಿ ಪರಿಹಾರ ನೀಡುವುದು ಸರಿಯೇ ಅಥವಾ ತಪ್ಪೇ ಎಂಬುದನ್ನು ಸಾರ್ವಜನಿಕರೇ ನಿರ್ಧರಿಸಬೇಕು ಎಂದು ಪ್ರಶ್ನಿಸಿದರು.ಮೈಸೂರು ರಾಜಮನೆತನದ ಪರ ಪ್ರತಿಭಟನೆ ಕೈಬಿಡಲು ಪ್ರಮೋದಾದೇವಿ ಒಡೆಯರ್ ಮನವಿ

ಒಟ್ಟಿನಲ್ಲಿ, ಮೈಸೂರು ಅರಮನೆ, ಚಿನ್ನದ ಅಂಬಾರಿ ಮತ್ತು ರಾಜಮನೆತನದ ಧಾರ್ಮಿಕ ಆಚರಣೆಗಳ ಕುರಿತಂತೆ ತಮ್ಮ ಹಕ್ಕು ಹಾಗೂ ನಿಲುವನ್ನು ಸ್ಪಷ್ಟಪಡಿಸಿರುವ ಪ್ರಮೋದಾದೇವಿ ಒಡೆಯರ್, ಸರ್ಕಾರದೊಂದಿಗೆ ಸಂಘರ್ಷ ತಮ್ಮ ಉದ್ದೇಶವಲ್ಲ. ಪರಸ್ಪರ ಗೌರವದೊಂದಿಗೆ ಸಂಪ್ರದಾಯಗಳಿಗೆ ಅವಕಾಶ ನೀಡಬೇಕು ಎಂಬುದಷ್ಟೇ ತಮ್ಮ ಆಶಯ ಎಂದು ಹೇಳಿದ್ದಾರೆ.Confident jk02_new jk02 new

 

English Summary
Title

Mysuru Palace Ownership Dispute: Pramodadevi Wadiyar Awaits Court Verdict

Short Description
Pramodadevi Wadiyar remains confident that an upcoming court verdict will permanently resolve the long-standing Mysuru Palace possession dispute. The conflict intensified during the 2026 Mysuru Dasara festival, highlighting structural friction between the Karnataka state government and the royal family over traditional rituals, property maintenance, and the use of the iconic golden howdah. While the government claims the heritage site under acquisition laws, the Wadiyar family defends its private property rights. The final judicial decision will ultimately determine the future of this historic monument.
Keywords
Confident, court verdict, possession, palace, Pramodadevi Wadiyar