ಐಪಿಎಲ್ ಗಳಿಕೆಯಲ್ಲಿ ಕೂಲ್ ಕ್ಯಾಪ್ಟನ್ ಧೋನಿ ‘ಸೂಪರ್ ಕಿಂಗ್’ !

ಬೆಂಗಳೂರು, ಫೆಬ್ರವರಿ 01, 2020 (www.justkannada.in): ಐಪಿಎಲ್’ನಲ್ಲಿ ಚೆನ್ನೈ ಪರ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಪಿಎಲ್ ನಲ್ಲಿ 150 ಕೋಟಿ ರೂಪಾಯಿ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕೂಲ್ ಕ್ಯಾಪ್ಟನ್.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಗಳಿಕೆ 2020ರ ಹೊಸ ಒಪ್ಪಂದಕ್ಕೂ ಮುನ್ನ 137 ಕೋಟಿ ರೂಪಾಯಿಯಾಗಿತ್ತು. ಒಪ್ಪಂದದ ನಂತ್ರ ಗಳಿಕೆ ಹೆಚ್ಚಾಗಿದ್ದು, ಧೋನಿ ದಾಖಲೆ ಬರೆದಿದ್ದಾರೆ.

ಅಂದಹಾಗೆ 2008ರಿಂದ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ನಿಭಾಯಿಸುತ್ತಿದ್ದಾರೆ. 2008ರ ಹರಾಜಿನಲ್ಲಿ ಧೋನಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದರು.