Sunday, September 20, 2026

BDA Apartments

ಕೆಜಿಎಫ್-2 ರಿಲೀಸ್ ದಿನ ರಾಷ್ಟ್ರೀಯ ರಜೆ ಘೋಷಿಸಿ! ಪ್ರಧಾನಿ ಮೋದಿಗೆ ಫ್ಯಾನ್ಸ್ ...
Home Cinema ಕೆಜಿಎಫ್-2 ರಿಲೀಸ್ ದಿನ ರಾಷ್ಟ್ರೀಯ ರಜೆ ಘೋಷಿಸಿ! ಪ್ರಧಾನಿ ಮೋದಿಗೆ ಫ್ಯಾನ್ಸ್ ಟ್ವೀಟ್

ಕೆಜಿಎಫ್-2 ರಿಲೀಸ್ ದಿನ ರಾಷ್ಟ್ರೀಯ ರಜೆ ಘೋಷಿಸಿ! ಪ್ರಧಾನಿ ಮೋದಿಗೆ ಫ್ಯಾನ್ಸ್ ಟ್ವೀಟ್

ಬೆಂಗಳೂರು, 31, 2021 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೆಜಿಎಫ್ ಅಭಿಮಾನಿಗಳು ವಿಶೇಷ ಮನವಿ ಮಾಡುತ್ತಿದ್ದಾರೆ.

ಕೆಜಿಎಫ್ 2 ಸಿನಿಮಾ ಜುಲೈ 16 ಕ್ಕೆ ಚಿತ್ರಮಂದಿರಗಳಲ್ಲಿ ಬಿಡಗುಡೆ ಆಗುತ್ತಿದ್ದು, ಆ ದಿನದಂದು ರಾಷ್ಟ್ರೀಯ ರಜೆ ಘೋಷಿಸಿರೆಂದು ಕೆಲವು ಮೋದಿ ಅವರಿಗೆ ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲಿ ಮನವಿ ಮಾಡುತ್ತಿದ್ದಾರೆ!

ಜುಲೈ 16 ರಂದು ನ್ಯಾಷನಲ್ ಹಾಲಿಡೆ (ರಾಷ್ಟ್ರದಾದ್ಯಂತ ರಜೆ) ಎಂದು ಘೋಷಿಸಿ ಎಂದು ಓನ್ಲಿ ಯಶ್ ಹೆಸರಿನ ಟ್ವಿಟ್ಟರ್ ಹ್ಯಾಂಡಲ್‌ ಮೂಲಕ ಅಭಿಮಾನಿಯೊಬ್ಬ ಮೋದಿ ಅವರಲ್ಲಿ ಮನವಿ ಮಾಡಿದ್ದಾನೆ.

ಅಂದಹಾಗೆ ಜುಲೈ 16 ಕ್ಕೆ ಯಶ್ ರ ಕೆಜಿಎಫ್ 2 ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.