ಕೋರ್ಟ್’ನಲ್ಲಿ ಮತ್ತೆ ಒಟ್ಟಿಗೆ ಭೇಟಿಯಾದ ಸಂಜನಾ-ರಾಗಿಣಿ !

ಬೆಂಗಳೂರು, 31, 2021 (www.justkannada.in): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ-ರಾಗಿಣಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಷರತ್ತುಬದ್ಧ ಜಾಮೀನು ದೊರೆತಿದ್ದು. ಇಬ್ಬರೂ ನಟಿಯರು ಷರತ್ತಿನಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ರಾಗಿಣಿ ಹಾಗೂ ಸಂಜನಾ ಅವರುಗಳು ಪ್ರತ್ಯೇಕವಾಗಿ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಟಿರಾಗಿಣಿಯು ತಮ್ಮ ತಂದೆ ಹಾಗೂ ವಕೀಲರ ಜೊತೆಗೆ ಆಗಮಿಸಿದ್ದರು.

ರಾಗಿಣಿಗೆ ಎನ್‌ಡಿಪಿಎಸ್ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿತ್ತು. ಕೆಲವು ಷರತ್ತುಗಳನ್ನು ವಕೀಲರು ಪೂರೈಸಿದ್ದರಾದರೂ, ರಾಗಿಣಿ ಸಹ ಖುದ್ದಾಗಿ ಹಾಜರಾಗಿ ಕೆಲವು ಷರತ್ತು ಪೂರೈಸಬೇಕಿತ್ತು.

ಜೊತೆಗೆ ಪ್ರಕರಣದ ವಿಚಾರಣೆಯೂ ಇಂದು ನಡೆಯುವುದಿತ್ತು ಹಾಗಾಗಿ ರಾಗಿಣಿ ನ್ಯಾಯಾಲಯಕ್ಕೆ ಆಗಮಿಸಿದ್ದರು.