Sunday, September 20, 2026

BDA Apartments

ಮಾಜಿ ಪಿಎಂ ಇಂದಿರಾ ಗಾಂಧಿ ಆಗಲಿದ್ದಾರೆ ಕಂಗನಾ ರಣಾವತ್ ! BDA JK_Adv BDA Adv
Home Cinema ಮಾಜಿ ಪಿಎಂ ಇಂದಿರಾ ಗಾಂಧಿ ಆಗಲಿದ್ದಾರೆ ಕಂಗನಾ ರಣಾವತ್ !

ಮಾಜಿ ಪಿಎಂ ಇಂದಿರಾ ಗಾಂಧಿ ಆಗಲಿದ್ದಾರೆ ಕಂಗನಾ ರಣಾವತ್ !

ಬೆಂಗಳೂರು, 31, 2021 (www.justkannada.in): ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಗಲಿದ್ದಾರೆ ಕಂಗನಾ ರಣಾವತ್!

ಹೌದು. ಬಾಲಿವುಡ್ ಬೆಡಗಿ ಕಂಗನಾ ಇಂದಿರಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಮಾಹಿತಿ ಹಂಚಿಕೊಂಡಿದ್ದಾರೆ.

ಕಂಗನಾ, ನಾನು ಮತ್ತು ನಿರ್ದೇಶಕ ಸಾಯಿ ಕಬೀರ್ ಜೊತೆಯಾಗಿ ರಾಜಕೀಯ ಆಧಾರಿತ ಸಿನಿಮಾ ಒಂದರಲ್ಲಿ ಕೆಲಸ ಮಾಡಲಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಕಂಗನಾ.

ಇದು ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜೀವನ ಚರಿತ್ರೆಯನ್ನು ಆಧರಿಸಿರುವ ಸಿನಿಮಾ ಅಲ್ಲ. ಬದಲಾಗಿ ಕೆಲವು ರಾಜಕೀಯ ತಿರುವುಗಳನ್ನು ಒಳಗೊಂಡಿರುವ ಸಿನಿಮಾ ಆಗಿದೆ ಎಂದಿದ್ದಾರೆ.