Monday, August 3, 2026

BDA Apartments

Home Crime ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಸಾಮಾಜಿಕ ಅನ್ಯಾಯ: ಮೈಸೂರಿನಲ್ಲಿ ಕುಟುಂಬವೊಂದಕ್ಕೆ ಸಾಮೂಹಿಕ ಬಹಿಷ್ಕಾರ ಹಾಕಿದ ಗ್ರಾಮಸ್ಥರು..

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಸಾಮಾಜಿಕ ಅನ್ಯಾಯ: ಮೈಸೂರಿನಲ್ಲಿ ಕುಟುಂಬವೊಂದಕ್ಕೆ ಸಾಮೂಹಿಕ ಬಹಿಷ್ಕಾರ ಹಾಕಿದ ಗ್ರಾಮಸ್ಥರು..

ಮೈಸೂರು,ಜೂ,24,2019(www.justkannada.in):  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರ ಕ್ಷೇತ್ರದಲ್ಲೆ ಸಾಮಾಜಿಕ ಅನ್ಯಾಯ ಬಹಿರಂಗವಾಗಿದೆ. ರಸ್ತೆಗಾಗಿ ಜಾಗ ಬಿಡದಿದಕ್ಕೆ ಕುಟುಂಬಕ್ಕೆ ಸಾಮೂಹಿಕ ಬಹಿಷ್ಕಾರ ಹಾಕಿರುವ ಘಟನೆ ಮೈಸೂರಿನ ಟಿ.ಕಾಟೂರು ಗ್ರಾಮದಲ್ಲಿ ನಡೆದಿದೆ.

ಕಾಟೂರಿನ ನಂಜಪ್ಪ ಕುಟುಂಬ ಸಾಮಾಜಿಕ ಬಹಿಷ್ಕಾರ ಒಳಗಾದವರು. ಪಂಚಾಯಿತಿ ಮಾಡಿ ಒಂದೇ ಕುಟುಂಬದ 9 ಮಂದಿಗೆ ಗ್ರಾಮದವರು ಬಹಿಷ್ಕಾರ ಹಾಕಿದ್ದಾರೆ. ನಂಜಪ್ಪ ಕುಟುಂಬದವರನ್ನ ಮಾತನಾಡಿಸಿದರೆ 25 ಸಾವಿರ ದಂಡ ಹಾಕುವುದಾಗಿ ಗ್ರಾಮದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಮುಖಂಡರು ಹಾಕಿರುವ ಬಹಿಷ್ಕಾರಕ್ಕೆ ಬೇಸತ್ತಿರುವ ಕುಟುಂಬ.ಊರಿನಲ್ಲಿ ದುಃಖದ ಬದುಕು ನಡೆಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜ‌ವಾಗಿಲ್ಲವೆಂದು ಕುಟುಂಬ ಗೋಳಿಡುತ್ತಿದೆ. ಅಲ್ಲದೆ ನಮಗೆ ನ್ಯಾಯ ದೊರಕಿಸಿಕೊಂಡಿ ಎಂದು ಮಾಧ್ಯಮದ ಮುಂದೆ ಸಾಮೂಹಿಕ ಬಹಿಷ್ಕಾರಕ್ಕೊಳಗಾದ ಕುಟುಂಬ ಅಂಗಲಾಚಿದೆ.

Key words:  Mysore- Family-villagers –mass boycott