Sunday, September 20, 2026

BDA Apartments

2021 ರಲ್ಲಿ ಭಾರತ ಸಾಧನೆಯ ಶಿಖರಕ್ಕೆ ಏರಲಿದೆ ಎಂದ ಮೋದಿ ! BDA JK_Adv BDA Adv
Home Front Page 2021 ರಲ್ಲಿ ಭಾರತ ಸಾಧನೆಯ ಶಿಖರಕ್ಕೆ ಏರಲಿದೆ ಎಂದ ಮೋದಿ !

2021 ರಲ್ಲಿ ಭಾರತ ಸಾಧನೆಯ ಶಿಖರಕ್ಕೆ ಏರಲಿದೆ ಎಂದ ಮೋದಿ !

ಬೆಂಗಳೂರು, ಡಿಸೆಂಬರ್ 27, 2020 (www.justkannada.in): 2021 ರಲ್ಲಿ ಭಾರತ ಹೊಸ ಸಾಧನೆಯ ಶಿಖರಕ್ಕೆ ಏರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

72ನೇ ಹಾಗೂ 2020 ರ ಸಾಲಿನ ಕೊನೆಯ ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ 2021ರಲ್ಲಿ ಭಾರತ ಸಾಧನೆ, ಸವಾಲುಗಳ ಕುರಿತು ಮಾತನಾಡಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ದೇಶದಲ್ಲಿ ಹಲವು ಸಮಸ್ಯೆಯಾಗಿದ್ದು, ದೇಶದಲ್ಲಿ ತಯಾರಿಸಲ್ಪಟ್ಟ ಆಟಿಕೆಗಳಿಗೆ ಬೇಡಿಕೆ ಹೆಚ್ಚಿದೆ. ದೇಶದ ಜನರ ಯೋಚನೆಯಲ್ಲಿ ಪರಿವರ್ತನೆಯಾಗಿದೆ. ದೇಶಿಯ ವಸ್ತುಗಳ ಮೇಲೆ ಜನರ ಆಕರ್ಷಣೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಆತಂಕ ದಿನಗಳು ಸಾಧ್ಯವಾಗದ್ದನ್ನು ಕೂಡ ಕಲಿಸಿದ್ದು ಸಂಕಷ್ಟದ ನಡುವೆ ದೇಶದಲ್ಲಿ ಸ್ವದೇಶಿ ಮಂತ್ರ ನಡೆದಿದೆ ಎಂದು ಹೇಳಿದ್ದಾರೆ.