Wednesday, August 5, 2026

BDA Apartments

Home Cinema ಸಂಕಷ್ಟದ ಸಮಯದಲ್ಲಿ ಹೊಸ ಸಂಸತ್ ಭವನ ಬೇಕಿತ್ತೇ? ಮೋದಿಗೆ ಕಮಲ್ ಹಾಸನ್ ಪ್ರಶ್ನೆ

ಸಂಕಷ್ಟದ ಸಮಯದಲ್ಲಿ ಹೊಸ ಸಂಸತ್ ಭವನ ಬೇಕಿತ್ತೇ? ಮೋದಿಗೆ ಕಮಲ್ ಹಾಸನ್ ಪ್ರಶ್ನೆ

ಬೆಂಗಳೂರು,ಡಿಸೆಂಬರ್,14,2020(www.justkannada.in): ನೂತನ ಸಂಸತ್ ಭವನ ನಿರ್ಮಾಣದ ಅಗತ್ಯವಿತ್ತೇ ಎಂದು ನಟ ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.

ಮಕ್ಕಳ್ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷದ ಮುಖ್ಯಸ್ಥರೂ ಆದ ನಟ ಕಮಲ್ ಹಾಸನ್ ನೂತನ ಸಂಸತ್ ಭವನ ನಿರ್ಮಾಣದ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಸವಾಲೆಸೆದಿದ್ದಾರೆ.

ಕೊರೊನಾ ವೈರಸ್‌ನಿಂದಾಗಿ ದೇಶ ಆರ್ಥಿಕ ಸಂಕಷ್ಟದಲ್ಲಿದೆ, ಜನರಿಗೆ ಉದ್ಯೋಗವಿಲ್ಲ, ಹಸಿವಿನಿಂದ ಬಳಲುತ್ತಿದ್ಧಾರೆ. ಇಂಥಾ ಸಮಯದಲ್ಲಿ ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ನೂತನ ಸಂಸತ್ ಭವನ ನಿರ್ಮಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

ಇನ್ನು 2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಪ್ರಚಾರ ಕಾರ್ಯ ಆರಂಭಿಸಿರುವ ಕಮಲ್ ಹಾಸನ್, ಮಧುರೈನಲ್ಲಿ ಮೊದಲ ಹಂತದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.