Thursday, August 6, 2026

BDA Apartments

Home Front Page 2023ರವರೆಗೆ  ಯಾವುದೇ ‘ಗ್ರೂಪಿಸಂ’ ಮಾಡಲ್ಲ-ಸಚಿವ ರಮೇಶ್ ಜಾರಕಿಹೊಳಿ…

2023ರವರೆಗೆ  ಯಾವುದೇ ‘ಗ್ರೂಪಿಸಂ’ ಮಾಡಲ್ಲ-ಸಚಿವ ರಮೇಶ್ ಜಾರಕಿಹೊಳಿ…

ಬೆಂಗಳೂರು,ನವೆಂಬರ್,28,2020(www.justkannada.in):  2023ರವರೆಗೆ ನಾನು ಯಾವುದೇ ‘ಗ್ರೂಪಿಸಂ’ ಮಾಡಲ್ಲ. ನಾನು ನಾಯಕತ್ವ ವಹಿಸಲ್ಲ. ನಮ್ಮದು ಸಾಮೂಹಿಕ ನಾಯಕತ್ವ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ. ಆದಷ್ಟು ಬೇಗ ಎಲ್ಲರಿಗೂ ಸಚಿವ ಸ್ಥಾನ ಕೊಡಬೇಕು. ಎಷ್ಟು ದಿನ ಆಗುತ್ತದೆ ಎಂದು ಹೇಳಲು ಆಗಲ್ಲ. ಎರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ ಫೈನಲ್ ಆಗುತ್ತದೆ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ.  ಪಕ್ಷ ಶಿಸ್ತಿನಲ್ಲಿರುವುದರಿಂದ ಎಲ್ಲವನ್ನೂ ಮಾತನಾಡಲು ಆಗಲ್ಲ ಎಂದರು.no-grouping-until-2023-minister-ramesh-jarakiholi

Key words: No grouping- until -2023-Minister -Ramesh jarakiholi.