Friday, August 7, 2026

BDA Apartments

Home Front Page ಇತ್ತೀಚೆಗೆ ಮೃತಪಟ್ಟ ಪತ್ರಕರ್ತ ಎನ್.ಎಸ್.ಹರೀಶ್ ಅವರ  ಕುಟುಂಬಕ್ಕೆ  5 ಲಕ್ಷ ರೂ. ಪರಿಹಾರ ಮಂಜೂರು…

ಇತ್ತೀಚೆಗೆ ಮೃತಪಟ್ಟ ಪತ್ರಕರ್ತ ಎನ್.ಎಸ್.ಹರೀಶ್ ಅವರ  ಕುಟುಂಬಕ್ಕೆ  5 ಲಕ್ಷ ರೂ. ಪರಿಹಾರ ಮಂಜೂರು…

ಬೆಂಗಳೂರು,ನವೆಂಬರ್,25,2020(www.justkannada.in): ಇತ್ತೀಚೆಗೆ ಮೃತಪಟ್ಟ ಮಂಡ್ಯ ಜಿಲ್ಲೆಯ ಪತ್ರಕರ್ತ ಎನ್.ಎಸ್.ಹರೀಶ್ ಅವರ ಕುಟುಂಬಕ್ಕೆ  ಸಿಎಂ ಬಿಎಸ್ ಯಡಿಯೂರಪ್ಪ 5 ಲಕ್ಷ ರೂ ನೆರವು ಮಂಜೂರು ಮಾಡಿದ್ದಾರೆ.

ಇತ್ತೀಚೆಗೆ ಮೃತಪಟ್ಟ ಮಂಡ್ಯದ ಎನ್.ಎಸ್.ಹರೀಶ್ ಅವರ ಕುಟುಂಬಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ದ ಮನವಿ ಮೇರೆಗೆ 5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ. ಪತ್ರಕರ್ತ ಎನ್.ಎಸ್.ಹರೀಶ್  ವಿಜಯವಾಣಿ, ಕನ್ನಡ ಪ್ರಭ, ಪ್ರಜಾವಾಣಿ, ಕೆಮ್ಮುಗಿಲು ಸೇರಿದಂತೆ ಹಲವು ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು.5 lakh compensation - journalist - family -mandya

ಪತ್ರಕರ್ತ ಎನ್.ಎಸ್.ಹರೀಶ್  ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಮಂಡ್ಯ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ನಾಗಮಂಗಲ ತಾಲ್ಲೂಕು ಪತ್ರಕರ್ತರ ಸಂಘ ರಾಜ್ಯ ಸಂಘಕ್ಕೆ ಮನವಿ ಮಾಡಿತ್ತು. ಸಂಘದ ಮನವಿಗೆ ಸ್ಪಂದಿಸಿ ಪರಿಹಾರ ಮಂಜೂರು ಮಾಡಿದ ಸಿಎಂ ಯಡಿಯೂರಪ್ಪ ಅವರಿಗೆ ಕೆಯುಡಬ್ಲ್ಯೂಜೆ ಕೃತಜ್ಞತೆ ಸಲ್ಲಿಸಿದೆ.

Key words: 5 lakh compensation – journalist – family -mandya