Tuesday, September 29, 2026

BDA Apartments

ಶಾಲಾ ಮಕ್ಕಳಿಗೆ ‘ಡಿಪಿಟಿ’ ಮತ್ತು ‘ಟಿಡಿ’ ಲಸಿಕಾ ಅಭಿಯಾನ ಆರಂಭ… BDA JK_Adv BDA Adv
Home Front Page ಶಾಲಾ ಮಕ್ಕಳಿಗೆ  ‘ಡಿಪಿಟಿ’ ಮತ್ತು ‘ಟಿಡಿ’ ಲಸಿಕಾ ಅಭಿಯಾನ ಆರಂಭ…

ಶಾಲಾ ಮಕ್ಕಳಿಗೆ  ‘ಡಿಪಿಟಿ’ ಮತ್ತು ‘ಟಿಡಿ’ ಲಸಿಕಾ ಅಭಿಯಾನ ಆರಂಭ…

ಮೈಸೂರು,ನವೆಂಬರ್,25,2020(www.justkannada.in): ಮೈಸೂರಿನಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ದಕ್ಷಿಣ ವಲಯ  ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ 1ನೇ ತರಗತಿ, 5ನೇ ತರಗತಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಡಿಪಿಟಿ’ ಮತ್ತು ‘ಟಿಡಿ’ ಲಸಿಕಾ ಅಭಿಯಾನ ಕಾರ್ಯಕ್ರಮ ಆರಂಭಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ರಾಮರಾಧ್ಯ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಶಾಲೆಗಳಲ್ಲಿ ಶಾಲೆಯ ಮುಖ್ಯಸ್ಥರು ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರ ಸಹಯೋಗದೊಂದಿಗೆ ಕೊರೋನಾ ಮಾರ್ಗಸೂಚಿಗಳನ್ವಯ ವ್ಯವಸ್ಥಿತವಾಗಿ ನೀಡಲಾಯಿತು. ಸಿಕೆಸಿ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಕೆ ನಾಗೇಶ್ ಬಿಆರ್ ಪಿಗಳಾದ ಮಂಜುನಾಥ್ ಶ್ರೀಕಂಠಶಾಸ್ತ್ರಿ, ಸಿಆರ್ ಪಿ ರಾಜು ಉಪಸ್ಥಿತರಿದ್ದರು.

Key words: mysore-Launch – vaccine campaign – school children