Wednesday, August 12, 2026

BDA Apartments

Home Cinema ಫ್ಯಾಂಟಮ್ ಚಿತ್ರೀಕರಣ: ಕೇರಳದತ್ತ ಕಿಚ್ಚನ ಪಯಣ !

ಫ್ಯಾಂಟಮ್ ಚಿತ್ರೀಕರಣ: ಕೇರಳದತ್ತ ಕಿಚ್ಚನ ಪಯಣ !

ಬೆಂಗಳೂರು, ನವೆಂಬರ್ 25, 2020 (www.justknnada.in): ಕಿಚ್ಚ ಸುದೀಪ್ ಸದ್ಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಸುಮಾರು 3 ತಿಂಗಳಿಂದ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಫ್ಯಾಂಟಮ್ ತಂಡ ಇತ್ತೀಚಿಗಷ್ಟೆ ಹೈದರಾಬಾದ್ ಚಿತ್ರೀಕರಣ ಮುಗಿಸಿ ಕರ್ನಾಟಕಕ್ಕೆ ವಾಪಸ್ ಆಗಿದೆ.

ಇದೀಗ ಮುಂದಿನ ಹಂತದ ಚಿತ್ರೀಕರಣವನ್ನು ಸೇರಳದಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದು, ಡಿಸೆಂಬರ್ ಮೊದಲ ವಾರದಿಂದ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಕೇರಳದಲ್ಲಿ ಪ್ರಾರಂಭವಾಗಲಿದೆ. ಬಳಿಕ ಬೆಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ಮಾಡುವ ಪ್ಲಾನ್ ಅನ್ನು ಚಿತ್ರ ತಂಡ ಮಾಡಿದೆ. ಫ್ಯಾಂಟಮ್ ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗುವ ಸಾಧ್ಯಕೆ ಇದೆ.