Wednesday, August 12, 2026

BDA Apartments

Home Front Page ಐಸಿಸಿಗೆ ಹೊಸ ಅಧ್ಯಕ್ಷ: ಗ್ರೆಗ್ ಬಾರ್ಕ್ಲೇ ಹೊಸ ಸಾರಥಿ

ಐಸಿಸಿಗೆ ಹೊಸ ಅಧ್ಯಕ್ಷ: ಗ್ರೆಗ್ ಬಾರ್ಕ್ಲೇ ಹೊಸ ಸಾರಥಿ

ದುಬೈ, ನವೆಂಬರ್ 25, 2020 (www.justknnada.in): ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ ನೂತರ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಆಯ್ಕೆಯಾಗಿದ್ದಾರೆ.

ಗ್ರೆಗ್ ಬಾರ್ಕ್ಲೇ 2012ರಿಂದ ನ್ಯೂಜಿಲೆಂಡ್ ಕ್ರಿಕೆಟ್‌ನ ವಾಣಿಜ್ಯ ವಕೀಲ ಮತ್ತು ನಿರ್ದೇಶಕರಾಗಿದ್ದರು. ಇದೀಗ ಎರಡನೇ ಸ್ವತಂತ್ರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗ್ರೆಗ್, ಭಾರತದ ಶಶಾಂಕ್ ಮನೋಹರ್ ಸ್ಥಾನ ತುಂಬಿದ್ದಾರೆ.

2015ರ ಐಸಿಸಿ ಪುರುಷರ ವಿಶ್ವಕಪ್‌ ವೇಳೆ ಗ್ರೆಗ್ ಬಾರ್ಕ್ಲೇ ನಿರ್ದೇಶಕರಾಗಿದ್ದರು. ನಾರ್ತರ್ನ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್‌ನ ಬೋರ್ಡ್ ಸದಸ್ಯ ಮತ್ತು ಅಧ್ಯಕ್ಷರು ಕೂಡ ಆಗಿದ್ದರು. ಅಲ್ಲದೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಬೇರೆ ಬೇರೆ ಕಂಪನಿಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಗ್ರೆಗ್‌ ಅವರಿಗಿದೆ.