ಐಪಿಎಲ್ ಮುಂದಿನ ಸೀಸನ್ ಭಾರತದಲ್ಲೇ ಆಯೋಜನೆ: ಗಂಗೂಲಿ

ಬೆಂಗಳೂರು, ನವೆಂಬರ್ 25, 2020 (www.justknnada.in): ಮುಂಬರುವ ಐಪಿಎಲ್​​​ ಭಾರತದಲ್ಲೇ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಮುಂದಿನ ಐಪಿಎಲ್​ನಲ್ಲಿ 8 ರಿಂದ 10 ತಂಡಗಳ ಇರುವಿಕೆಯ ಬಗ್ಗೆಯೂ ಚರ್ಚೆ ನಡೆಲಾಗುವುದು ಎಂದು ಸೌರವ್ ತಿಳಿಸಿದ್ದಾರೆ.
ಇನ್ನು ಆಸಿಸ್ ಪ್ರವಾಸದ ಬಳಿಕ ಟೀಂ ಇಂಡಿಯಾ ಪೂರ್ಣ ಪ್ರಮಾಣದಲ್ಲಿ ಇಂಗ್ಲೆಂಡ್​​ ತಂಡದ ವಿರುದ್ಧ ಸೆಣಸಾಡಲಿದೆ.

ಇದಕ್ಕಾಗಿ ಈಗಾಗಲೇ ಸರಣಿಯ ಪ್ಲಾನ್ ಮಾಡಲಾಗಿದೆ. 5 ಟಿ-20 ಪಂದ್ಯ, 3 ಏಕದಿನ ಪಂದ್ಯ ಹಾಗೂ 4 ಟೆಸ್ಟ್​ ಪಂದ್ಯಗಳನ್ನ ಆಡಲಿದೆ ಎಂದು ಗಂಗೂಲಿ ಮಾಹಿತಿ ನೀಡಲಿದ್ದಾರೆ.