ನಿವಾರ್ ಚಂಡಮಾರುತ ಹಿನ್ನೆಲೆ: ವಿಮಾನ ಹಾರಾಟ ರದ್ಧು…

ಚೆನ್ನೈ,ನವೆಂಬರ್,25,2020(www.justkannada.in): ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದ  ಆರ್ಭಟ ಜೋರಾಗಿದ್ದು ಚೆನ್ನೈ ಮಹಾನಗರದಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.I didn't knew CM BSY will think so cheaply - KPCC President D.K. Shivakumar

ತಮಿಳುನಾಡು ಸರ್ಕಾರದಿಂದ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ. ಈ ಮೊದಲು ಅಗತ್ಯ ಅಂಗಡಿಗಳ ಓಪನ್ ಗೆ ಅನುಮತಿ ನೀಡಲಾಗಿತ್ತು. ಆದರೆ, ಭಾರೀ ಮಳೆಯ ಆರ್ಭಟದ ಕಾರಣ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಈ ಮಧ್ಯೆ ಚೆನ್ನೈನಿಂದ ಹೊರಡಬೇಕಿದ್ಧ 24 ವಿಮಾನ ಹಾರಾಟವನ್ನ ರದ್ದು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚೆನ್ನೈ ಏರ್ ಪೋರ್ಟ್ ನ ರನ್ ವೇ ನಲ್ಲಿ ನೀರು ಸಂಗ್ರಹವಾಗಿದ್ದು ಈ ಹಿನ್ನೆಲೆ ಚೆನ್ನೈ ಏರ್ ಪೋರ್ಟ್ ನಿಂದ ಹೊರಡಬೇಕಿದ್ಧ 24 ವಿಮಾನಗಳ ಹಾರಾಟವನ್ನ ರದ್ಧು ಮಾಡಲಾಗಿದೆ. ನಿವಾರ್ ಚಂಡಮಾರುತ ಭಾರಿ ವೇಗದ ಗಾಳಿ ಜೊತೆಗೆ ಮಳೆಯಾಗುತ್ತಿರುವ ಕಾರಣ ಜನ ತತ್ತರಿಸಿಹೋಗಿದ್ದಾರೆ.

 

Key words: nivar-hurricane –tamilunadu- Cancel –flight-chennai- airport