Sunday, September 20, 2026

BDA Apartments

‘ಪ್ಯಾನ್ ಇಂಡಿಯಾ ಸಿನಿಮಾ ನಮ್ಮನ್ನು ಉದ್ದಾರ ಮಾಡಲ್ಲ ಎಂದ ಜಗ್ಗೇಶ್ BDA JK_Adv BDA Adv
Home Cinema ‘ಪ್ಯಾನ್ ಇಂಡಿಯಾ ಸಿನಿಮಾ ನಮ್ಮನ್ನು ಉದ್ದಾರ ಮಾಡಲ್ಲ ಎಂದ ಜಗ್ಗೇಶ್

‘ಪ್ಯಾನ್ ಇಂಡಿಯಾ ಸಿನಿಮಾ ನಮ್ಮನ್ನು ಉದ್ದಾರ ಮಾಡಲ್ಲ ಎಂದ ಜಗ್ಗೇಶ್

ಬೆಂಗಳೂರು, ನವೆಂಬರ್ 25, 2020 (www.justknnada.in): ಬೇರೆ ಭಾಷೆಯ ಸಿನಿಮಾಗಳೂ ಕನ್ನಡಕ್ಕೆ ಪ್ಯಾನ್ ಇಂಡಿಯಾ ಹೆಸರಿನಲ್ಲಿ ಎಗ್ಗಿಲ್ಲದೇ ಬರುತ್ತಿದೆ. ಇದರ ಬಗ್ಗೆ ನಟ ಜಗ್ಗೇಶ್ ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಕನ್ನಡದ ಜತೆಗೆ ಬೇರೆ ಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ಸಾಮಾನ್ಯವಾಗಿದೆ. ಈ ಬಗ್ಗೆಯೂ ಜಗ್ಗೇಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ಯಾನ್ ಇಂಡಿಯಾ ಸಿನಿಮಾ ನಮ್ಮನ್ನು ಉದ್ದಾರ ಮಾಡಲ್ಲ. ಇದರಿಂದ ನಮ್ಮ ಕನ್ನಡಿಗರಿಗೆ ಕೆಲಸವಿಲ್ಲದಂತಾಗಿದೆ. ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ಹಾಗಿದೆ ಎಂದಿದ್ದಾರೆ ನವರಸ ನಾಯಕ.

ಮೊದಲು ನಮ್ಮತನವನ್ನು ಉಳಿಸಿಕೊಳ್ಳೋಣ. ಇಲ್ಲದೇ ಹೋದರೆ ಅನ್ಯರ ಮನೆ ಬಾಗಿಲ ಮುಂದೆ ಮನೆ ಕಾಯುವ ಕೆಲಸ ಮಾಡಬೇಕಾದೀತು’ ಎಂದು ಜಗ್ಗೇಶ್ ಕಿಡಿ ಕಾರಿದ್ದಾರೆ.