Wednesday, July 29, 2026

BDA Apartments

Home Front Page ಶಾಸಕರ ಗ್ರಾಮದಲ್ಲಿಯೇ ಹದಗೆಟ್ಟ ರಸ್ತೆ : ರಸ್ತೆಯಲ್ಲೇ ನಾಟಿ ಮಾಡಿ ಗ್ರಾಮಸ್ಥರಿಂದ ಆಕ್ರೋಶ

ಶಾಸಕರ ಗ್ರಾಮದಲ್ಲಿಯೇ ಹದಗೆಟ್ಟ ರಸ್ತೆ : ರಸ್ತೆಯಲ್ಲೇ ನಾಟಿ ಮಾಡಿ ಗ್ರಾಮಸ್ಥರಿಂದ ಆಕ್ರೋಶ

 ಕೊಳ್ಳೇಗಾಲ,ಅಕ್ಟೋಬರ್,10,2020(www.justkannada.in) : ಶಾಸಕ ಎನ್.ಮಹೇಶ್ ಸ್ವಗ್ರಾಮ ಶಂಕನಪುರದ ರಸ್ತೆ ಹದಗೆಟ್ಟಿದ್ದು, ಕೆಸರು ಗದ್ದೆಗಳಾಗಿ ಮಾರ್ಪಟ್ಟಿದೆ. ಶಾಸಕರ ಗಮನಸೆಳೆಯಲು ಗ್ರಾಮದ ಜನತೆ ನಡುರಸ್ತೆಯಲ್ಲಿ ಭತ್ತ ನಾಟಿ ಮಾಡಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.jk-logo-justkannada-logoಬಾಪು ನಗರ ಹೆದ್ದಾರಿಯಿಂದ ಅಡ್ಡರಸ್ತೆಯಲ್ಲಿ ಶಂಕನಪುರ ಮಾರ್ಗವಾಗಿ ಹಂಪಾಪುರ ಸೇರುವ ಒಂದೂವರೆ ಕಿಲೋ ಮೀಟರ್ ರಸ್ತೆಯು ಹದಗೆಟ್ಟಿದೆ. ಇತ್ತೀಚೆಗೆ ನಿತ್ಯ ಸುರಿವ ಮಳೆಯಿಂದಾಗಿ ಹಳ್ಳ, ಗುಂಡಿಗಳು ಕೆಸರು ಗದ್ದೆಯಂತ್ತಾಗಿವೆ. ವಾಹನ ಸವಾರರಂತೂ ಹೈರಾಣಾಗಿದ್ದು, ಆಕ್ರೋಶಗೊಂಡ ರೈತರು ನಡುರಸ್ತೆಯಲ್ಲೇ ಭತ್ತ ನಾಟಿ ಮಾಡುವ ಮೂಲಕ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ.Damaged-road-MLA's village-Outrage-villagers- planting-roadಪ್ರತಿಭಟನೆ ವೇಳೆ ಗ್ರಾಮದ ನಿವಾಸಿ ನಿಂಗರಾಜು ಮಾತನಾಡಿ ಕಳೆದ ಆರು ವರ್ಷಗಳಿಂದ ಈ ರಸ್ತೆ ಹೀಗಿದೆ. ಯಾವೊಬ್ಬ ಜನಪ್ರತಿನಿದಿಯೂ ಇತ್ತ ತಲೆ ಹಾಕಿಲ್ಲ. ಜೀವದ ಹಂಗು ತೊರೆದು ಪ್ರಯಾಣಿಸಬೇಕಿದೆ. ರಸ್ತೆ ದುರಸ್ತಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

key words : Damaged-road-MLA’s village-Outrage-villagers- planting-road