Wednesday, August 5, 2026

BDA Apartments

Home Cinema ಡ್ರಗ್ ಮಾಫಿಯಾ: ಶರ್ಮಿಳಾ ಮಾಂಡ್ರೆ ಅಪಘಾತ ಪ್ರಕರಣಕ್ಕೆ ಮರುಜೀವ !

ಡ್ರಗ್ ಮಾಫಿಯಾ: ಶರ್ಮಿಳಾ ಮಾಂಡ್ರೆ ಅಪಘಾತ ಪ್ರಕರಣಕ್ಕೆ ಮರುಜೀವ !

ಬೆಂಗಳೂರು, ಸೆಪ್ಟೆಂಬರ್ 05, 2020 (www.justkannada.in):ಲಾಕ್ ಡೌನ್ ವೇಳೆ ಮಧ‍್ಯರಾತ್ರಿ ವೇಳೆ ಕಾರು ಅಪಘಾತ ಮಾಡಿಕೊಂಡಿದ್ದ ನಟಿ ಶರ್ಮಿಳಾ ಮಾಂಡ್ರೆಗೆ ಪ್ರಕರಣಕ್ಕೆ ಮರು ಜೀವ ಬರುತ್ತಿದೆ.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಕುರಿತಂತೆ ಶರ್ಮಿಳಾ ಹೆಸರು ಕೂಡಾ ಕೇಳಿಬಂದಿತ್ತು. ಲಾಕ್ ಡೌನ್ ವೇಳೆ ಕಾರು ಅಪಘಾತವಾದಾಗ ಶರ್ಮಿಳಾ ಜತೆ ಡ್ರಗ್ ಪೆಡ್ಲರ್ ಇದ್ದರು ಎಂಬಿತ್ಯಾದಿ ವಿಚಾರಗಳು ಓಡಾಡುತ್ತಿವೆ. ಈ ಸಂಬಂಧ ಪ್ರಕರಣದ ಮರು ವಿಚಾರಣೆಯೂ ನಡೆಯಬಹುದು ಎನ್ನಲಾಗಿದೆ.

ಈ ಬಗ್ಗೆ ಈಗ ಸಿಸಿಬಿ ವಿಚಾರಣೆ ನಡೆಸಲಿದೆ. ಹೀಗಾಗಿ ಅಂದು ಆಗಿದ್ದ ಆಕ್ಸಿಡೆಂಟ್ ಪ್ರಕರಣಕ್ಕೆ ಮರು ಜೀವ ಸಿಗಲಿದೆ. ಸದ್ಯಕ್ಕೆ ಶರ್ಮಿಳಾ ಕೊರೋನಾ ನೆಪ ಹೇಳಿದ್ದು, ಗುಣಮುಖರಾದ ಬಳಿಕ ವಿಚಾರಣೆಗೊಳಪಡಿಸುವ ಸಾಧ‍್ಯತೆಯಿದೆ.