Tuesday, September 22, 2026

BDA Apartments

ಸುಶಾಂತ್ ಆತ್ಮಹತ್ಯೆ ಕೇಸ್: ರಿಯಾ ಸಹೋದರ ಅರೆಸ್ಟ್ BDA JK_Adv BDA Adv
Home Cinema ಸುಶಾಂತ್ ಆತ್ಮಹತ್ಯೆ ಕೇಸ್: ರಿಯಾ ಸಹೋದರ ಅರೆಸ್ಟ್

ಸುಶಾಂತ್ ಆತ್ಮಹತ್ಯೆ ಕೇಸ್: ರಿಯಾ ಸಹೋದರ ಅರೆಸ್ಟ್

ಮುಂಬೈ, ಸೆಪ್ಟೆಂಬರ್ 05, 2020 (www.justkannada.in): ಎನ್ ಸಿ ಬಿ ಅಧಿಕಾರಿಗಳು ನಟ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಹಾಗೂ ಸ್ಯಾಮ್ಯುಯೆಲ್ ಮಿರಾಂಡಾ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.

ಮಾದಕವಸ್ತು ನಿಯಂತ್ರಣ ಬ್ಯೂರೋ ಕಾರ್ಯವಿಧಾನದ ಪ್ರಕಾರ ಈ ದಾಳಿ ನಡೆಸಲಾಗಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಪ್ರಮುಖ ಆರೋಪಿ ಹಾಗೂ ನಟಿ ರಿಯಾ ಚಕ್ರವರ್ತಿ ಮನೆ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗಾಂಜಾ, ಎಂಡಿಎಂಎ ಮತ್ತು ಇತರ ಔಷಧಿಗಳಂತಹ ವಿಷಯಗಳನ್ನು ಚರ್ಚಿಸುವ ಅನೇಕ ಚಾಟ್‌ಗಳನ್ನು ಮೊಬೈಲ್ ನಲ್ಲಿ ನಡೆಸಲಾಗಿತ್ತು. ರಿಯಾ ಸಹೋದರ ಶೋಯಿಕ್ ಕೂಡ ಮಾದಕ ವಸ್ತುಗಳನ್ನು ಸರಬರಾಜು ಮಾಡುವುದು ಮತ್ತು ಖರೀದಿಸುವುದು ತನಿಖೆ ವೇಳೆ ಕಂಡುಬಂದಿದೆ.