Sunday, August 2, 2026

BDA Apartments

Home Cinema ಫಿಲ್ಮಂ ಛೇಂಬರ್ ವಿರುದ್ದ ಗರಂ: ನಟಿ ಸಂಜನಾ ಬಗ್ಗೆ ಮಾತನಾಡಿ ಬಾಯಿ ಗಲೀಜು ಮಾಡಿಕೊಳ್ಳಲ್ಲ ಎಂದ...

ಫಿಲ್ಮಂ ಛೇಂಬರ್ ವಿರುದ್ದ ಗರಂ: ನಟಿ ಸಂಜನಾ ಬಗ್ಗೆ ಮಾತನಾಡಿ ಬಾಯಿ ಗಲೀಜು ಮಾಡಿಕೊಳ್ಳಲ್ಲ ಎಂದ ಪ್ರಶಾಂತ್ ಸಂಬರಗಿ ..

ಬೆಂಗಳೂರು,ಸೆಪ್ಟಂಬರ್,3,2020(www.justkannada.in):  ಕನ್ನಡ ಚಿತ್ರರಂಗಕ್ಕೆ ತಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಫಿಲ್ಮ ಛೇಂಬರ್  ವಿರುದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕಿಡಿಕಾರಿದ್ದಾರೆ.jk-logo-justkannada-logo

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ದಂಧೆ ನಂಟು ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪರ ಮಾತನಾಡಿದ್ದ  ಪ್ರಶಾಂತ್ ಸಂಬರಗಿ ಅವರಿಗೆ ಚಿತ್ರರಂಗಕ್ಕೆ ಸಂಬಂಧವೇನು ಎಂದು ಸಾ.ರಾ ಗೋವಿಂದು ಪ್ರಶ್ನಿಸಿದ್ದರು.

ಈ ಕುರಿತು ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಪ್ರಶಾಂತ್ ಸಂಬರಗಿ, ಕನ್ನಡ ಚಿತ್ರರಂಗಕ್ಕೆ ನನ್ನ ಕೊಡುಗೆ ಏನೆಂದು ಗೂಗಲ್ ನಲ್ಲಿ ಹುಡುಕಿದರೇ ಸಿಗುತ್ತದೆ. ಕನ್ನಡ ಚಿತ್ರರಂಗಕ್ಕೆ ನನ್ನ ಕೊಡುಗೆ ಏನು ಇಲ್ಲ ಎನ್ನುತ್ತಿದ್ದಾರೆ. ಹೀರೋ ಆಗಲು ನಾನು ಬಂದವನು. ಆದರೆ ನಾನಾ ಕಾರಣಗಳಿಂದ ನನಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ರಿಲಯನ್ಸ್ ಪ್ರಿಪೈಡ್ ಸಿಮ್ ಗೆ ಸುದೀಪ್ ಆ್ಯಡ್ . ಆ್ಯಡ್ ಮಾಡಿಸಿದ್ದು ನಾನು.   ಲವ್ ಬರ್ಡ್ಸ್ ಸಿನಿಮಾ ಮಾಡಿದ್ದೇನೆ. ರಿಂಗ್ ಟ್ಯೂನ್ ತೆಗೆದುಕೊಳ್ಳಲು ನನ್ನ ಕಚೇರಿಗೆ ಕನ್ನಡ ಚಿತ್ರರಂಗದವರು ಬರುತ್ತಿದ್ದರು. ಹೀಗಾಗಿ  ಹಲವು ರೀತಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಸಹಾಯ ಮಾಡಿದ್ದೇನೆ. ಚಿತ್ರರಂಗದಲ್ಲಿ ಸಾಕಷ್ಟು ಸಣ್ಣಪುಟ್ಟ ಕೆಲಸ ಮಾಡಿದ್ದೇನೆ  ಹಲವು ಚಿತ್ರಗಳ ಡಿಸ್ಟ್ರಿಬ್ಯೂಷನ್ ಮಾಡಿದ್ದೇನೆ. 5 ಕೋಟಿ ಕಳೆದುಕೊಂಡಿದ್ದೇನೆ. ಇಷ್ಟೆಲ್ಲ ಆಗಿದ್ದರೂ ನನಗೆ ಚಿತ್ರರಂಗಕ್ಕೆ ಸಂಬಂಧ ಇಲ್ಲ ಅಂತಾರೆ ಎಂದು ಕಿಡಿಕಾರಿದರು.

ಫಿಲ್ಮಂ ಚೇಂಬರ್ ಏನು ನಿರಾಶ್ರಿತ ಕೇಂದ್ರನಾ. ಅಥವಾ ಯೋಗಾ ಸೆಂಟರಾ..? ಫಿಲ್ಮಂ ಚೇಂಬರ್ ಸದಸ್ಯನೂ ಅಲ್ಲ ಆಗೋದು ಇಲ್ಲ ಎಂದು  ಹರಿಹಾಯ್ದರು.film-chamber-actress-sanjana-prashanth-sambaragi

ಹಾಗೆಯೇ ನಟಿ ಸಂಜನಾ ವಿರುದ್ದ ವಾಗ್ದಾಳಿ ನಡೆಸಿದ ಪ್ರಶಾಂತ್ ಸಂಬರಗಿ, ಸಂಜನಾ ಬಗ್ಗೆ ಮಾತನಾಡಿ ಬಾಯಿ ಗಲೀಜು ಮಾಡಿಕೊಳ್ಳಲ್ಲ. ಅವರು ಯಾವ ಮಟ್ಟದಲ್ಲಿ ಇದ್ದಾರೆ ಅಂತಾ ಇಂಡಸ್ಟ್ರಿಗೆ ಗೊತ್ತು.. ? ಅವರ ಬಗ್ಗೆ ನಾನು ಮಾತನಾಡಲ್ಲ. ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪವಿದೆ. ನಟಿ ಸಂಜನಾ ವಿರುದ್ದ ಫಿಲ್ಮಂ ಛೇಂಬರ್ ಕ್ರಮ ಕೈಕೊಂಡಿಲ್ಲ ಎಂದು ಆರೋಪಿಸಿದರು.

Key words: Film Chamber-actress –Sanjana- Prashanth Sambaragi