ಡ್ರಗ್ಸ್ ಜಾಲದ ನಂಟು ಆರೋಪ: ನಟಿ ರಾಗಿಣಿ ಆಪ್ತ ಮತ್ತು ನಟಿ ಸಂಜನಾ ಆಪ್ತನ ವಿಚಾರಣೆ ತೀವ್ರಗೊಳಿಸಿದ ಸಿಸಿಬಿ…

ಬೆಂಗಳೂರು,ಸೆಪ್ಟಂಬರ್,3,2020(www.justkannada.in): ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ಮತ್ತು ನಟಿ ಸಂಜನಾ ಆಪ್ತರನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.jk-logo-justkannada-logo

ನಟಿ  ರಾಗಿಣಿ ಆಪ್ತ ರವಿಶಂಕರ್ ರನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಬೆನ್ನಲ್ಲೆ  ಮತ್ತೊಬ್ಬ ನಟಿ  ಸಂಜನಾ ಅವರ ಆಪ್ತ ರಾಹುಲ್  ರನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಡ್ರಗ್ಸ್ ಜಾಲದ ನಂಟಿನ ಬಗ್ಗೆ ತನಿಖೆ ತೀವ್ರಗೊಳಿಸಿದ ಸಿಸಿಬಿ ಅಧಿಕಾರಿಗಳು ರವಿ ಶಂಕರ್ ಹಾಗೂ ರಾಹುಲ್  ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ನಡುವೆ ರಾಹುಲ್ ಅವರ ಕಾರನ್ನೂ ವಶಕ್ಕೆ ಪಡೆದಿದ್ದಾರೆ.drugs-accuse-ccb-investigation-actress-raginis-sanjana-closer

ಇತ್ತ ಡ್ರಗ್ಸ್ ಜಾಲದ ನಂಟು ಆರೋಪ ಕುರಿತು ಹೇಳಿಕೆ ನೀಡಿರುವ ನಿರ್ದೇಶಕ ಇಂದ್ರಜಿತ್ ಅವರನ್ನ 2ನೇ ಬಾರಿಗೆ ಇಂದು ಸಿಸಿಬಿ ವಿಚಾರಣೆ ಮಾಡಲಿದ್ದು ಇಂದ್ರಜಿತ್ ಲಂಕೇಶ್ ಮತ್ತಷ್ಟು ಮಾಹಿತಿ ನೀಡುವ ಸಾಧ್ಯತೆ ಇದೆ.

Key words: Drugs -accuse -CCB – investigation -actress -Ragini’s- Sanjana-closer