Wednesday, August 5, 2026

BDA Apartments

Home Front Page ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಸಬಾಂಬ್…

ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಸಬಾಂಬ್…

ತುಮಕೂರು,ಆಗಸ್ಟ್ 31,2020(www.justkannada.in): ಸ್ಯಾಂಡಲ್​​ವುಡ್​​ ನಲ್ಲಿ ಡ್ರಗ್ಸ್​​ ರೇವ್​​ ಪಾರ್ಟಿ ನಡೆಯುತ್ತದೆ. ಅನೇಕ ಸಿನಿ ತಾರೆಯರು. ರಾಜಕೀಯ ವ್ಯಕ್ತಿಗಳು. ದೊಡ್ಡ ದೊಡ್ಡ ನಿರ್ದೇಶಕರ ಮಕ್ಕಳು. ಹಿರಿಯ ನಟರ ಮಕ್ಕಳು ಈ ದಂಧೆಯಲ್ಲಿದ್ದಾರೆ ಎಂಬ ಹೇಳಿಕೆ ಚಂದನವನದಲ್ಲಿ ಮಹಾ ಸ್ಫೋಟವನ್ನೇ ಎಬ್ಬಿಸಿದೆ. ಇದರ ಬೆನ್ನಲ್ಲೇ ಡ್ರಗ್ ಸ್ಕ್ಯಾಂಡಲ್ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ  ನನ್ನ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು ಎಂದು ಹೊಸಾ ಬಾಂಬ್​​​ ಸಿಡಿಸಿದ್ದಾರೆ.jk-logo-justkannada-logo

ನಶೆ ಮಾಫಿಯಾ ಬಗ್ಗೆ ತುರುವೇಕೆರೆಯಲ್ಲಿ ಮಾತನಾಡಿದ ಹೆಚ್​ ಡಿ ಕುಮಾರಸ್ವಾಮಿ,  ನಾನು ಸಿಎಂ ಆಗಿದ್ದಾಗ ಡ್ರಗ್ಸ್​ ದಂಧೆಗೆ ಬ್ರೇಕ್​​​​​​ ಹಾಕಲು ಯತ್ನಿಸಿದ್ದೆ. ಈ ವೇಳೆ ಕೆಲವರು ಶ್ರೀಲಂಕಾಗೆ ಓಡಿ ಹೋದರು. ನನ್ನ ಸರ್ಕಾರ ಬೀಳಿಸೋಕೆ ಡ್ರಗ್ಸ್​, ಬೆಟ್ಟಿಂಗ್​ ಹಣ ಬಳಕೆ ಆಯ್ತು ಎಂದು ಮೈತ್ರಿ ಸರ್ಕಾರ ಪತನಕ್ಕೆ ಡ್ರಗ್ ಮಾಫಿಯಾ ಕಾರಣ ಎಂಬ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.

ನನ್ನ ಸರ್ಕಾರ ಬೀಳಿಸೋಕೆ ಡ್ಯಾನ್ಸ್ ಬಾರ್​ಗಳ ಹಣವನ್ನ ಬಳಕೆ ಮಾಡಿಕೊಂಡಿದ್ದಾರೆ. ಕ್ರಿಕೆಟ್​ ಬೆಟ್ಟಿಂಗ್​​, ಪಬ್​​​ ಹಣ ಬಳಸಿ ಮೈತ್ರಿ ಸರ್ಕಾರ ಕೆಡವಿದ್ರು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇಂತಹ ಕೆಟ್ಟ ಮಾಫಿಯಾಗಳಿಗೆ ಚಿಕ್ಕ, ಚಿಕ್ಕ ಮಕ್ಕಳು ಬಲಿಯಾಗಬಾರದು. ಆದ್ದರಿಂದ ಇದರಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ, ಈ ಹಗರಣದ ಹಿಂದೆ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರು ಅವರ ವಿರುದ್ಧ ಕಠಿಣ ಕ್ರಮ ಜರುಗಬೇಕು ಎಂದು ಹೆಚ್​ಡಿಕೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕೊರೋನಾದಿಂದಾಗಿ ವೈದ್ಯರ ಸಲಹೆ ಮೇರೆಗೆ ಜನರ ಸಂಪರ್ಕ ದಿಂದ ದೂರ ‌ಇದ್ದೆ. ಇವತ್ತು ಅನಿವಾರ್ಯವಾಗಿ ತುರುವೇಕೆರೆಗೆ ಬಂದಿದ್ದೇನೆ. ನಾನು ನನ್ನ ಕ್ಷೇತ್ರಕ್ಕೂ ಹೋಗಲು ಆಗ್ತಿಲ್ಲ. ಇಂಥ ಸಂದರ್ಭದಲ್ಲಿ ತುರುವೇಕೆರೆಗೆ ಬಂದಿದ್ದೇನೆ ಅಂದರೆ ಇಲ್ಲಿಯ ಸಮಸ್ಯೆ ದೊಡ್ಡದಿದೆ. ಗುಡ್ಡೇನಹಳ್ಳಿ ರೈತರ ತೋಟವನ್ನು ನಾಶಪಡಿಸಿ ಒಕ್ಕಲೆಬ್ಬಿಸಿದ್ದಾರೆ. ಇಲ್ಲಿಯ ಶಾಸಕರು ರೈತರ ನೆರವಿಗೆ ಬಂದಿಲ್ಲ. ಸ್ಪಂದಿಸಿಲ್ಲ. ಶಾಸಕರು ತಾಳ್ಮೆಯಿಂದ ಜವಾಬ್ದಾರಿ ನಿರ್ವಹಿಸಿದರೆ ಏನೂ ಆಗುತ್ತಿರಲಿಲ್ಲ. ರೈತರ ಮೇಲಿನ ದಬ್ಬಾಳಿಕೆ ವಿರುದ್ದ ಪ್ರತಿಭಟನೆ ಮಾಡಲು ಜೆಡಿಎಸ್ ಸಜ್ಜಾಗಿತ್ತು. ಆದರೆ ೧೪೪ ಸೆಕ್ಸನ್ ಜಾರಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂಡಿಯಾ ಪಾಕಿಸ್ತಾನ ಗಡಿಯ ರೀತಿ ವಾತಾವರಣ ಸೃಷ್ಟಿ ಮಾಡಿದ್ದಾರೆ. ಪೊಲೀಸ್ ಪರೇಡ್ ಮಾಡಿ  ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಆದರೂ ಕಾನೂನು ಉಲ್ಲಂಘನೆ ಮಾಡುವ ಉದ್ದಟತನ ನಾವು ಮಾಡಲ್ಲ. ಪ್ರತಿಭಟನಾ ರ್ಯಾಲಿ ಮಾಡಲ್ಲ…ಪಾದಯಾತ್ರೆ  ನಿಲ್ಲಿಸಿದ್ದೇನೆ. ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಬಂದಿದ್ದಾರೆ. ಶಾಂತಿಯುತವಾಗಿ  ಮನವಿ ಕೊಡುತ್ತೇವೆ ಎಂದರು.my-government-overthrown-drug-dealers-former-cm-hd-kumaraswamy-new-bomb

ಮಾಜಿ ಶಾಸಕ ಎಮ್ ಟಿ ಕೃಷ್ಣಪ್ಪ ಜನರಿಂದ ಸೋತಿಲ್ಲ. ನಮ್ಮ ಪಕ್ಷದವರಿಂದಲೇ ಸೋತಿದ್ದಾರೆ. ಶಾಸಕ ಮಸಾಲೆ ಜಯರಾಮ್ ಗೆ ಅನುಭವದ ಕೊರತೆ ಇದೆ. ಜೆಡಿಎಸ್ ಕಾರ್ಯಕರ್ತರ ಬೆನ್ನಿಗೆ ನಾವು ನಿಂತಿದ್ದೇವೆ. 4 ನಿಮಿಷದಲ್ಲಿ ಬಗೆಹರಿಸುವ ಸಮಸ್ಯೆಯನ್ನು ಅಧಿಕಾರಿಗಳೇ ಬೆಟ್ಟ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಈ ರೀತಿಯ ದೇಶದ ಆಸ್ತಿನಾ ಮಾರಾಟ ಮಾಡುತ್ತಿದೆ. ಇದೇ ರೀತಿ ರೈತರ ಭೂಮಿನೂ ಉಳ್ಳವರ ಪಾಲಾಗುವ ಕಾನೂನು ತಂದಿದೆ ಎಂದು ಹೆಚ್.ಡಿಕೆ ಕಿಡಿಕಾರಿದರು.

Key words: My government -overthrown – drug dealers-Former CM-HD Kumaraswamy -New Bomb.