ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಇನ್ನಿಲ್ಲ

ನವದೆಹಲಿ,ಆಗಸ್ಟ್,31,2020(www.justkannada.in):  ಭಾರತದ ಮಾಜಿ ರಾಷ್ಟ್ರಪತಿ,  ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರಣಬ್ ಮುಖರ್ಜಿ (84)  ಅವರು ಇಂದು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೋವಿಡ್ 19 ಪಾಸಿಟಿವ್ ದೃಢಪಟ್ಟಿತ್ತು. ಈ ಬಗ್ಗೆ ಸ್ವತಃ ಮುಖರ್ಜಿ ಅವರು ಟ್ವೀಟ್ ಮಾಡಿ ವಿಷಯ ಹಂಚಿಕೊಂಡು, ತನ್ನ ಸಂಪರ್ಕಕ್ಕೆ ಬಂದವರು ಐಸೋಲೇಶನ್ ಗೆ ಒಳಗಾಗುವಂತೆ ಮನವಿ ಮಾಡಿಕೊಂಡಿದ್ದರು.

ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅಲ್ಲದೇ ಅವರನ್ನು ವೆಂಟಿಲೇಟರ್ ನಲ್ಲಿ ಇಟ್ಟು ನಿಗಾವಹಿಸಲಾಗಿತ್ತು.

ಇದೀಗ ಚಿಕಿತ್ಸೆ ಫಲಿಸದೆ ಪ್ರಣಬ್ ಮುಖರ್ಜಿ ನಿಧನರಾಗಿದ್ದಾರೆ. ಪ್ರಣಬ್ ಮುಖರ್ಜಿ ಭಾರತದ 13ನೇ ರಾಷ್ಟ್ರಪತಿಯಾಗಿ, ದೇಶದ ಆರ್ಥಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇವರಿಗೆ 2019ರಲ್ಲಿ ಭಾರತರತ್ನ ಪ್ರಶಸ್ತಿ ನೀಡಲಾಗಿತ್ತು.

Key words: Former President- Pranab Mukherjee (84) -no more.