Tuesday, October 13, 2026

Dasara Wishes

Happy Dasara
Home Cinema ಧ್ರುವ ಸರ್ಜಾ-ಪ್ರೇರಣಾ ಆಸ್ಪತ್ರೆಯಿಂದ ಬಿಡುಗಡೆ: ಹೋಂ ಕ್ವಾರಂಟೈನ್’ಗೆ ಸೂಚನೆ

ಧ್ರುವ ಸರ್ಜಾ-ಪ್ರೇರಣಾ ಆಸ್ಪತ್ರೆಯಿಂದ ಬಿಡುಗಡೆ: ಹೋಂ ಕ್ವಾರಂಟೈನ್’ಗೆ ಸೂಚನೆ

ಬೆಂಗಳೂರು, ಜುಲೈ 16, 2020 (www.justkannada.in): ಕೊರೊನಾ ಸೋಂಕಿತರಾಗಿದ್ದ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಕೊರೊನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆ ವೇಳೆ ದೃಢಪಟ್ಟ ಹಿನ್ನೆಲೆಯಲ್ಲಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಅವರನ್ನು ಒಂದು ದಿನ ಆಸ್ಪತ್ರೆಯಲ್ಲಿ ಇರಿಸಿಕೊಂಡ ನಂತರ ಡಿಸ್ಜಾರ್ಜ್ ಮಾಡಲಾಗಿದೆ. ಜತೆಗೆ 14 ದಿನ ಹೋಂ ಕ್ವಾರಂಟೈನ್ ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ.

ಧ್ರುವ ಸರ್ಜಾ ಮತ್ತು ಪ್ರೇರಣಾ ಅವರನ್ನು ಸಾಮಾನ್ಯ ರೋಗ ಲಕ್ಷಣ ಹೊರತುಪಡಿಸಿ ಯಾವುದೇ ಕೊರೊನಾ ಸೋಂಕಿನ ಲಕ್ಷಣಗಳು ಹೆಚ್ಚಾಗಿ ಕಂಡು ಬಾರದ ಹಿನ್ನೆಲೆಯಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ.