ಮಗನ ಡ್ಯಾನ್ಸ್ ವೀಡಿಯೋ ಪೋಸ್ಟ್ ಮಾಡಿದ ರಾಕ್ಹಿಂಗ್ ಸ್ಟಾರ್!

ಬೆಂಗಳೂರು, ಜುಲೈ 16, 2020 (www.justkannada.in): ಮ್ಯೂಸಿಕ್​ವೊಂದಕ್ಕೆ ಖುಷಿಯಿಂದ ಹೆಜ್ಜೆ ಹಾಕ್ತಿರೋ ವಿಡಿಯೊವೊಂದನ್ನ ಅಪ್​ಲೋಡ್ ಮಾಡಿದ್ದಾರೆ ರಾಕ್ಹಿಂಗ್ ಸ್ಟಾರ್ ದಂಪತಿ!

ರಾಕಿಂಗ್​ ಸ್ಟಾರ್ ಯಶ್​ ಬ್ಯಾಗ್ರೌಂಡ್​ನಲ್ಲಿ ನಿಂತು ಮಗುವನ್ನ ಹುರಿದುಂಬಿಸ್ತಾ ಇದ್ದಾರೆ. ಈ ವಿಡಿಯೋದಲ್ಲಿ ರಾಕಿಂಗ್​ ಸ್ಟಾರ್​, ಜೂನಿಯರ್ ರಾಕಿಂಗ್​ ಸ್ಟಾರ್​ನ್ನ ಕೆಂಚು ಅಂತ ಕರೆದಿದ್ದು, ಮಗುವಿನ ಪೆಟ್ ನೇಮ್​ ರಿವೀಲ್​ ಆಗಿದೆ.

ಜೂನಿಯರ್ ರಾಕಿಂಗ್​ಸ್ಟಾರ್​ನ ಪೋಟೋಶೂಟ್ ಮಾಡಿಸಿ, ಮಗುವಿನ ಮುಖವನ್ನ ರಿವೀಲ್​ ಮಾಡಿದ್ದ ಯಶ್​ ದಂಪತಿ ಈಗ ಮತ್ತೊಂದು ವೀಡಿಯೋ ಮಾಡಿ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ.