Monday, October 12, 2026

Dasara Wishes

Happy Dasara
Home Front Page ದ್ವಿತೀಯ ಪಿಯು ಫಲಿತಾಂಶ ಪ್ರಕಟದ ದಿನಾಂಕ ಬಹಿರಂಗಪಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್…

ದ್ವಿತೀಯ ಪಿಯು ಫಲಿತಾಂಶ ಪ್ರಕಟದ ದಿನಾಂಕ ಬಹಿರಂಗಪಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್…

ಬೆಂಗಳೂರು,ಜು,9,2020(www.justkannada.in):  ಜುಲೈ 20ರ ಸುಮಾರಿಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.jk-logo-justkannada-logo

ಈ ಕುರಿತು ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಸುರೇಶ್ ಕುಮಾರ್ , ಬಹಳ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ 2 ನೇ PUC ಫಲಿತಾಂಶ ಇಂದು ಬರುತ್ತದೆಯೇ ಎಂದು ಕೇಳುತ್ತಿದ್ದಾರೆ. ಈಗಾಗಲೇ ತಿಳಿಸಿರುವಂತೆ ಎರಡನೇ ಪಿಯುಸಿ ಫಲಿತಾಂಶ ಜುಲೈ 20 ರ ಸುಮಾರಿಗೆ ಬರಲಿದೆ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.second-pu-results-publish-june-20th-education-minister-suresh-kumar

ಕಳೆದ ಮಾರ್ಚ್ 4ರಿಂದ 21ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿತ್ತು. ಕೊರೊನಾ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆಯಾಗಿತ್ತು. ಈ ಪರೀಕ್ಷೆಯನ್ನು ಜೂ.18ರಂದು ನಡೆಸಲಾಗಿತ್ತು.

Key words: Second PU – Results- Publish- June 20th-Education Minister -Suresh Kumar