Thursday, July 30, 2026

BDA Apartments

Home Front Page ಸೂರ್ಯಗ್ರಹಣ: ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ

ಸೂರ್ಯಗ್ರಹಣ: ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ

ಮೈಸೂರು, ಜೂನ್ 21, 2020 (www.justkannada.in): ಇಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಾನುವಾರ ಹಿನ್ನಲೆ ಚಾಮುಂಡಿಬೆಟ್ಟದ ದೇವಾಲಯ ಬಂದ್‌ ಮಾಡಲಾಗಿತ್ತು. ಜತೆಗೆ ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಗ್ರಹಣದ ಸ್ಪರ್ಶ ಕಾಲದಿಂದ ಗ್ರಹಣದ ಮೋಕ್ಷ ಕಾಲದವರೆಗೆ ಸತತ 3 ಗಂಟೆಕಾಲ ಪೂಜೆ ನಡೆಯಲಿದೆ. ಗ್ರಹಣ ಸಂದರ್ಭದಲ್ಲಿ ಚಾಮುಂಡೇಶ್ವರಿಯ ಮೂಲ ವಿಗ್ರಹಕ್ಕೆ ನಾಲ್ಕು ಬಾರಿ ಅಭಿಷೇಕ ನಡೆಸಲಾಗುತ್ತಿದೆ.

ಸ್ವರ್ಶ ಕಾಲ, ಮಧ್ಯ ಕಾಲ ಹಾಗೂ ಮೋಕ್ಷ ಕಾಲದಲ್ಲಿ ಚಾಮುಂಡಿಗೆ ಅಭಿಷೇಕ. ಗ್ರಹಣ ಪೂಜೆ ವೇಳೆ ಪ್ರಧಾನ ಅರ್ಚಕರನ್ನ ಬಿಟ್ಟು ಮತ್ಯಾರಿಗು ಪ್ರವೇಶವಿಲ್ಲ. ಗ್ರಹಣ ಮೋಕ್ಷವಾದ ನಂತರ ದೇವಾಲಯದ ಶುದ್ದಿಕಾರ್ಯ ನಡೆಯಲಿದೆ.